ಅಂಗನವಾಡಿ ಆಹಾರ ಅಕ್ರಮ ಸಂಗ್ರಹ - ಆಹಾರ ನೀರಿಕ್ಷಕರಿಂದ ದೂರು ದಾಖಲು.
Author : Vinayak M Bhat
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಯಲವಿದಾಳ ಗ್ರಾಮದ ಚಂದ್ರಶೇಖರ ಕೇಶವ ವಂಡಕರ ರವರ ಮನೆಯಲ್ಲಿ ಅಂಗನವಾಡಿ ಮಕ್ಕಳಿಗೆ ಪೂರೈಕೆ ಆಗಬೇಕಿದ್ದ ಅಂದಾಜು 1,83,072.00ಕಿಮ್ಮತ್ತಿನ ಬೆಲ್ಲ ತುಂಬಿದ 6 ಪ್ಲಾಸ್ಟಿಕ್ ಚೀಲಗಳು, ಅಕ್ಕಿ ತುಂಬಿದ 34 ಚೀಲಗಳು, ಪೌಷ್ಟಿಕ ಆಹಾರ ತುಂಬಿದ 45 ಪ್ಲಾಸ್ಟಿಕ್ ಚೀಲಗಳು, ಮಿಲೆಟ್ ಆಹಾರ ತುಂಬಿದ 27 ಚೀಲಗಳು, ಗೋದಿ ನುಚ್ಚು ತುಂಬಿದ 22 ಪ್ಲಾಸ್ಟಿಕ್ ಚೀಲಗಳು, ಗೋದಿ ರವಾ ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಹಿನ್ನೆಲೆಯಲ್ಲಿ ಕಲಘಟಗಿ ಪೊಲೀಸ್ ಠಾಣೆ ಯಲ್ಲಿ 156/2025,ಕಲಂ 3 ರ /ವಿ 7ಇ. ಸಿ. ಆಕ್ಟ್ -1955 ಅಡಿಯಲ್ಲಿ ಆಹಾರ ನೀರಿಕ್ಷಕರಾದ ರಾಜೀವಸಿಂಗ್ ಶಂಕರ್ ಸಿಂಗ್ ಬೆಂಗಳೂರ್ಕರ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲಘಟಗಿ ಪೊಲೀಸ್ ಠಾಣೆಯ ಸಿ. ಪಿ. ಐ. ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿ ವರ್ಗ ಆಹಾರ ದಾಸ್ತಾನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇಷ್ಟೆಲ್ಲಾ ಅಕ್ರಮಗಳು ನಡೆದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಯಾಕೆ ಇಂತಹ ಅಕ್ರಮಗಳಿಗೆ ಗಮನ ಹರಿಸುತ್ತಿಲ್ಲ ಎನ್ನುವದು ಸಾರ್ವಜನಿಕ ಚಿಂತನೆ ಆಗಿದೆ.














