ಜಾತಿ ವ್ಯವಸ್ಥೆಯಿಂದ ದೇಶ ಕಟ್ಟಲು ಆಗುವುದಿಲ್ಲ: ಸಚಿವ ಸಂತೋಷ್ ಎಸ್ ಲಾಡ್
Author : Vinayak M Bhat
ಕಲಘಟಗಿ
ಜಾತಿ ವ್ಯವಸ್ಥೆಯಿಂದ ದೇಶ ಕಟ್ಟಲು ಆಗುವುದಿಲ್ಲ ಎಂದು ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಹೇಳಿದರು.
ತಾಲೂಕಿನ ದೇವಿಕೊಪ್ಪ ಗ್ರಾಮದ ಗ್ರಾಮ ಪಂಚಾಯತಿಯ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ದೇಶದ ಅಭಿವೃದ್ಧಿಯಾಗಬೇಕಾದರೆ ಈಗಿರುವ ಈ ಜಾತಿ ವ್ಯವಸ್ಥೆಯು ಹೋಗಲೇಬೇಕು. ಯಾವುದೇ ಸಭೆ ಸಮಾರಂಭಗಳು ನಡೆದಾಗ ಊರ ಗೌರವ, ಘನತೆ ಮುಖ್ಯವಾಗಿರುತ್ತದೆ. ಯಾವುದೇ ಅಧಿಕಾರಿ ಲಂಚ ಕೇಳಲಿ ಆ ಕ್ಷಣದಲ್ಲೇ ನನಗೆ ಕರೆ ಮಾಡಿರಿ. ನಾ ಎಲ್ಲೇ ಇರಲಿ ನಿಮ್ಮ ಸೇವೆಗೆ ಸದಾ ಸಿದ್ಧವಿದ್ದೇನೆ. ಪೋಡಿ ಕೇಸುಗಳು ತುಂಬಾ ಬಾಕಿ ಇವೆ. ಕಂದಾಯ ಇಲಾಖೆಯಲ್ಲಿ ವಿಳಂಬವಾದಲ್ಲಿ ನೇರವಾಗಿ ನನ್ನ ಹಾಗೂ ನಿಮ್ಮ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕಾಗದ ಪತ್ರಗಳನ್ನು ಕೊಡಿ. ಇದರ ಜವಾಬ್ದಾರಿಯನ್ನು ತೆಗೆದುಕೊಂಡು ನಾನೇ ಸ್ವತಃ ನಿಂತು ಬಗೆಹರಿಸಿ ಕೊಡುತ್ತೇನೆ ಎಂದರು. ಬೋವಿ ಜನಾಂಗದ ಎಸ್.ಸಿ ಜನಾಂಗಕ್ಕೆ ಸೇರಿಸುವ, ಜಾತಿ ಪ್ರಮಾಣ ಪತ್ರಕ್ಕೆ ಆಕ್ರೋಶಗೊಂಡ ಭೋವಿ ಜನಾಂಗ. ಗ್ರಾಮದ ಹಿರಿಯರಾದ ಮಹದೇವಪ್ಪ ಭೋವಿಯವರು ನಮಗೆ ಜಾತಿ ಪ್ರಮಾಣ ಪತ್ರ ನೀಡದಿದ್ದರಿಂದ ನಮ್ಮ ಮಕ್ಕಳಿಗೆ ಸರ್ಕಾರದ ಯಾವುದೇ ಸೌಲಭ್ಯಗಳೂ ಸಿಗದೇ ವಂಚಿತರಾಗಿದ್ದೇವೆ. ಈಗಾಗಲೇ ಅಣ್ಣಿಗೇರಿ ವಿಭಾಗದಲ್ಲಿ ಈ ಜಾತಿ ಪ್ರಮಾಣ ಪತ್ರವನ್ನು ನೀಡಿದ ಪ್ರತಿಯನ್ನು ಸಚಿವರಿಗೂ, ತಹಶೀಲ್ದಾರವರಿಗೂ ತೋರಿಸಿದರು. ಎಲ್ಲ ಭೋವಿ ಜನಾಂಗದ ಮಹಿಳೆಯರು ಈ ಕುರಿತು ಸಚಿವರಲ್ಲಿ ಬಗೆಹರಿಸಲು ಬೇಡಿಕೊಂಡರು. ಹವಳದ ಹಿಂಡಸಗೆರಿಯಿಂದ ವಿದ್ಯಾಭ್ಯಾಸಕ್ಕೆ ತೆರಳುವ ಮಕ್ಕಳಿಗೆ ಕಾರವಾರ ಹುಬ್ಬಳ್ಳಿಯ ಬಸ್ ನಿಲುಗಡೆಗೆ ಗ್ರಾಮಸ್ಥರು ಬೇಡಿಕೆ ಇಟ್ಟರು. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಕೂಡಲೇ ಈ ಸಮಸ್ಯೆ ಬಗೆಹರಿಸಲು ಸಾರಿಗೆ ಸಿಬ್ಬಂದಿ ಅಧಿಕಾರಿಗೆ ಸೂಚಿಸಿದರು. ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಸಿ.ಎಸ್.ಉಳ್ಳಾಗಡ್ಡಿ ಈಚನಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆ ಸುಧಾರಣೆ, ದೇವಿಕೊಪ್ಪ ತಾಂಡಾ ಹಾಗೂ ಈಚನಳ್ಳಿ ತಾಂಡಾ ಗ್ರಾಮಗಳ ಈ ಸ್ವತ್ತು ಮಾಡಿಸುವ ವ್ಯವಸ್ಥೆ, ಪ್ರಾಥಮಿಕ ಆರೋಗ್ಯ ವ್ಯವಸ್ಥೆ, ಪಿ.ಯು ಕಾಲೇಜು ಮುಂತಾದವುಗಳ ಕುರಿತು ಬೇಡಿಕೆ ಇಟ್ಟರು. ಕೃಷಿ ಸಹಾಯಕ ನಿರ್ದೆಶಕರಾದ ಎನ್.ಎಫ್.ಕಟ್ಟೇಗೌಡರ್ ಇಲಾಖೆಯಿಂದ ಸಿಗುವ ಯೋಜನೆಯಗಳ ಕುರಿತು ಮಾಹಿತಿ ನೀಡಿದರು. ಪಶು ಇಲಾಖೆ ಯ ವತಿಯಿಂದ ಚರ್ಮ ಗಂಟು ರೋಗದಿಂದ ಸಾವು ಸಂಭವಿಸಿದ ದನಗಳ ಮಾಲಿಕರಿಗೆ ಪರಿಹಾರದ ಚೆಕ್ ಹಾಗೂ ಬರ ತೀವ್ರವಿರುವುದರಿಂದ ಮೇವಿನ ಬೀಜದ ಕಿಟ್ ಗಳನ್ನು ಸಚಿವರು ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಸಚಿವರ ಆಪ್ತ ಕಾರ್ಯದರ್ಶಿ ಹರಿಶಂಕರ್ ಮಠದ, ಸೋಮಶೇಖರ ಬೆನ್ನೂರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಸಾವಂತ್, ಬಿ.ಇ.ಓ ಉಮಾದೇವಿ ಬಸಾಪೂರ, ಕುಮಾರ ಕೆ.ಎಫ್, ಸಿ.ಡಿ.ಪಿ.ಓ ಡಾ|ವೀಣಾ, ಎಲ್ಲ ಇಲಾಖೆ ಅಧಿಕಾರಿಗಳು, ನಿಜಗುನಿ ಕೆಲಗೇರಿ, ಲಕ್ಷ್ಮಣ ರಾಠೋಡ, ತಾಂತ್ರಿಕ ಸಹಾಯಕ ಅಭಿಷೇಕ್ ಡೊಂಬರ್, ಗ್ರಾ.ಪಂ ಅಧ್ಯಕ್ಷ ಮಂಜುನಾಥ ಕೆಲಗೇರಿ, ಉಪಾಧ್ಯಕ್ಷೆ ದೇವಕಿ ಲಮಾಣಿ, ಮಾಜಿ ಅಧ್ಯಕ್ಷ ಸಾತಪ್ಪ ಸೂಳಿಕಟ್ಟಿ, ಎಲ್ಲ ಸದಸ್ಯರು ಊರ ನಾಗರಿಕರು ಉಪಸ್ಥಿತರಿದ್ದರು. ಮಂಜುನಾಥ ವಾಡಕರ್ ನಿರೂಪಿಸಿದರು.















