Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮುಖ್ಯ: ಸಹದೇವ ಹರಮಣ್ಣವರ

ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮುಖ್ಯ: ಸಹದೇವ ಹರಮಣ್ಣವರ



Author : Vinayak M Bhat

ಕಲಘಟಗಿ
    ಮಕ್ಕಳ ಭವಿಷ್ಯ ರೂಪಗೊಳ್ಳಲು ಅವರ ಸರ್ವಾಂಗೀಣ ಅಭಿವೃದ್ಧಿ ಮುಖ್ಯ ಎಂದು ಕಲಘಟಗಿಯ ಅನ್ನಪೂರ್ಣ ತರಬೇತಿ ಸಂಸ್ಥೆಯ ಅಧ್ಯಕ್ಷ ಸಹದೇವ ಹರಮಣ್ಣವರ ಹೇಳಿದರು. 
   ಹುಬ್ಬಳ್ಳಿಯಲ್ಲಿ ನಡೆದ ಅಸ್ಪ್ಯಾರ್ ಕರಾಟೆ ಅಕಾಡೆಮಿ ಹಾಗೂ ಡೆಕಾಥ್ಲಾನ್ ಸ್ಪೋಟ್ರ್ಸ ವತಿಯಿಂದ ಜಿಲ್ಲಾಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ 14 ಮಕ್ಕಳು ಭಾಗವಹಿಸಿ 25 ಬಹುಮಾನಗಳನ್ನು ಸ್ವೀಕರಿಸಿ ಮಾತನಾಡಿದರು.
    ಪ್ರತಿಯೊಂದು ಮಗುವಿನಲ್ಲೂ ಅಗಾಧ ಶಕ್ತಿ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಿ ಬೆಳೆಸುತ್ತಿದ್ದೇವೆ ಎಂದರು. ಸಂಸ್ಥೆಯ ಉದಯಗೌಡ ಮಾತನಾಡಿ ಸುಮಾರು 5 ವರ್ಷಗಳಿಂದ ಸಂಸ್ಥೆಯ ಕರಾಟೆ, ಭರತನಾಟ್ಯ ಹಾಗೂ ಸಂಗೀತ ತರಬೇತಿ ನೀಡುತ್ತಿದ್ದೇವೆ. ಅನೇಕ ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡಿ ಸಾಮಾಜಿಕ ಪ್ರಶಂಸೆಗೆ ಮಕ್ಕಳು ಪಾತ್ರರಾಗಿದ್ದಾರೆ. ಕಟಾ ಚಾಂಪಿಯನ್‍ಲ್ಲಿ ಅನ್ನಪೂರ್ಣ ಹರಮಣ್ಣವರ, ವೈಷ್ಣವಿ ಪೂಜಾರ್ ಪ್ರಥಮ, ನಯನ ಹರಮಣ್ಣವರ, ತೇಜಸ್ ಕುಲಕರ್ಣಿ, ಶ್ರೇಯಸ್ ಗುಂಡೇನಹಳ್ಳಿ ದ್ವಿತಿಯ, ವಿಜಯಲಕ್ಷ್ಮೀ ಹರಮಣ್ಣವರ, ನಿರ್ಮಯ ಗೌಡರ್, ಸೂರ್ಯ ಚಿಕ್ಕಣ್ಣವರ, ವರ್ಷ ತಹಶೀಲ್ದಾರ್, ನಿಜನಗೌಡರ್ ತೃತೀಯ, ಕುಮಿಟೆ (ಫೈಟ್) ವಿಭಾಗ ಸೇರಿ ಪ್ರಶಸ್ತಿ ಗೆದ್ದಿದ್ದರಿಂದ ಸಂಸ್ಥೆಯ ಸಿಬ್ಬಂದಿ, ಪಾಲಕರು, ಎಲ್ಲ ಅಭಿಮಾನಿ ಬಳಗದವರು ಮಕ್ಕಳಿಗೆ ಶುಭ ಕೋರಿದ್ದಾರೆ.