ಸೂಪರ್ ಸ್ಪೀಡಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಿದ ಕಲಘಟಗಿ ಸಿ ಪಿ ಆಯ್ ಶ್ರೀಶೈಲ್ ಕೌಜಲಗಿ ಮತ್ತು ಟೀಮ್
Author : Vinayak M Bhat
ಕಳೆದ ಮಂಗಳವಾರ ರಾತ್ರಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಹತ್ತಿರ ರಸ್ತೆ ಪಕ್ಕದಲ್ಲಿ ಭೀಕರವಾಗಿ ಹತ್ಯೆಗೈದ ಶವವೊಂದು ಪತ್ತೆಯಾಗಿತ್ತು. ಕಾರ್ಯ ಪ್ರವೃತ್ತರಾದ ಪೊಲೀಸ್ ಸಿಬ್ಬಂದಿ ಕೊಲೆಯಾದ ವ್ಯಕ್ತಿ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದ ವಿಠ್ಠಲ ಬಸಪ್ಪ ಕರಡಿ ಎಂದು ಗುರುತಿಸಿದ್ದು ಈತನು ಹುಬ್ಬಳ್ಳಿಯ ವಿದ್ಯಾನಗರ, ನವನಗರ, ಹುಬ್ಬಳ್ಳಿ ಗ್ರಾಮೀಣ ಸೇರಿದಂತೆ ವಿವಿಧ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಅದೇ ದುಡ್ಡಲ್ಲಿ ಮೋಜಿನ ಜೀವನ ಸಾಗಿಸುತ್ತಿದ್ದ. ಕಲಘಟಗಿ ಠಾಣೆಯ ಸಿ ಪಿ ಆಯ್ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.













