ಕಲಘಟಗಿಯಲ್ಲಿ ಅಕ್ಕ ಕೆಫೆ ಉದ್ಘಾಟಿಸಿದ ಸಚಿವ ಸಂತೋಷಲಾಡ್
Author : Vinayak M Bhat
ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ- ಸಚಿವ ಸಂತೋಷಲಾಡ್

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಲು ಅಕ್ಕ ಕೆಫೆ ಯೋಜನೆಯು ಸಹಕಾರಿಯಾಗಿದೆ ಎಂದು ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷಲಾಡ್ ಹೇಳಿದರು.
ಕಲಘಟಗಿ ಪಟ್ಟಣದ ತಾಲೂಕ ಪಂಚಾಯತಿಯ ಮಾರಾಟ ಮಳಿಗೆಯಲ್ಲಿ ಅಕ್ಕ ಕೆಫೆ ಉದ್ಘಾಟಿಸಿ ಮಾತನಾಡಿದರು. ಸ್ತ್ರೀ ಸಬಲೀಕರಣವಾಗದೇ ಯಾವುದೇ ಕುಟುಂಬವಾಗಲೀ, ದೇಶವಾಗಲೀ, ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಜೀವನೋಪಾಯದ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು 2024-25 ನೇ ಸಾಲಿನ ಆಯವ್ಯಯ ಖಂಡಿಕೆ 228 ರಲ್ಲಿ ಈ ಯೋಜನೆಯನ್ನು ಘೋಷನೆ ಮಾಡಿದ್ದಾರೆ. ಇದು ಮಹಿಳೆಯರಿಂದಲೇ ನಡೆಯುವ ಕೆಫೆಯಾಗಿದ್ದು ಶುಚಿ-ರುಚಿಗೆ ಯೋಗ್ಯವಾಗಿದೆ. ಕಲಘಟಗಿ ಪಟ್ಟಣದ ನಾಗರಿಕರು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಹೋಳಿಗೆ, ಕಾಫಿ ಸವಿದರು.

ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು, ಪಂಚ ಗ್ಯಾರೆಂಟಿ ಯೋಜನೆ ಜಿಲ್ಲಾಧ್ಯಕ್ಷ, ಎಸ್.ಆರ್.ಪಾಟೀಲ್, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ಧೇಶಕರಾದ ಪ್ರಿಯಾಂಗ ಎಂ, ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಭುವನೇಶ ದೇವಿದಾಸ ಪಾಟೀಲ್, ಉಪಕಾರ್ಯದರ್ಶಿಗಳಾದ ಮಲ್ಲಪ್ಪ ತೊದಲಬಾಗಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪ ವಿಭಾಗಾಧೀಕಾರಿ ಶಾಲಂ ಹುಸೇನ್, ಕಲಘಟಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಸಾವಂತ, ಸಚಿವರ ಆಪ್ತ ಕಾರ್ಯದರ್ಶಿಗಳಾದ ಹರೀಶಶಂಕರ ಮಠದ, ಸೋಮಶೇಖರ ಬೆನ್ನೂರ, ತಹಶೀಲ್ದಾರ ಬಸವರಾಜ ಹೊಂಕನವರ, ಸಿ.ಪಿ.ಆಯ್ ಶ್ರೀಶೈಲ್ ಕೌಜಲಗಿ, ಬಾಬು ಅಂಚಟಗೇರಿ, ಬಾಳು ಖಾನಾಪುರ, ಗಾಯಕ್ವಾಡ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ ಮುರಳ್ಳಿ, ಶಿವಲಿಂಗ ಮೂಗಣ್ಣವರ, ನ್ಯಾಯವಾದಿ ಮಂಜುನಾಥ ಮೂಗಣ್ಣವರ, ಗುರು ಬೆಂಗೇರಿ, ಹಾಗೂ ಸಂಜೀವಿನಿ ಸಿಬ್ಬಂದಿಗಳು, ಸ್ವ ಸಹಾಯ ಸಂಘದ ಮಹಿಳೆಯರು , ಒಕ್ಕೂಟದ ಸಿಬ್ಬಂದಿಗಳು , ಸಾರ್ವಜನಿಕರು ಭಾಗವಹಿಸಿದ್ದರು.












