ಕರ್ನಾಟಕದಲ್ಲಿ ಕೌಶಲ್ಯಗಳ ಭಂಡಾರವಿದೆ - ಸಂತೋಷ ಲಾಡ್
Author : Vinayak M Bhat
ಲಂಡನ್ :
ಕರ್ನಾಟಕದಲ್ಲಿ ಕೌಶಲ್ಯಗಳ ಭಂಡಾರವಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಅವರು ಲಂಡನ್ನ ವೆಸ್ಟ್ಮಿನಿಸ್ಟರ್, ಹೌಸ್ ಲಾರ್ಡ್ಸ್ನಲ್ಲಿ , SWIA 0OW IEBF ಗ್ಲೋಬಲ್ ಬ್ಯುಸಿನೆಸ್ ಮೀಟ್ 2024 ರ ವಿಕಸಿತ್ ಭಾರತ್ ಹೂಡಿಕೆ ಶೃಂಗಸಭೆಯಲ್ಲಿ ಮಾತನಾಡಿದರು.
ಜಿಡಿಪಿಯಲ್ಲಿ ಕರ್ನಾಟಕವು ನಂಬರ್ ಒನ್ ಸ್ಥಾನದಲ್ಲಿದೆ, ನಾವು ಹಾಲಿನ ಉತ್ಪಾದನೆಯಲ್ಲಿ, ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದೇವೆ. ಸೌರ ಉತ್ಪಾದನೆಯಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಇದ್ದೇವೆ. ದೇಶದ ಎರಡನೇ ಮತ್ತು ಏಷ್ಯಾದ ಅತಿದೊಡ್ಡ ಸೌರ ಸ್ಥಾವರವು ನಮ್ಮಲ್ಲಿದೆ. ನಾವು ಇಂದು ಸುಮಾರು 8000 ಮೆಗಾ ವ್ಯಾಟಗಳ ವಿದ್ಯುತ್ ಅನ್ನು ಉತ್ಪಾದನೆ ಮಾಡುತ್ತಿದ್ದೇವೆ. ಮಾಹಿತಿ ತಂತ್ರಜ್ಞಾನ ಮತ್ತು ಬಯೋ ತಂತ್ರಜ್ಞಾನಗಳಲ್ಲಿ ಕರ್ನಾಟಕವು ಯಾವಾಗಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಉಕ್ಕು ಉತ್ಪಾದನೆಯಲ್ಲಿ ನಮ್ಮ ಭಾರತವು ಸುಮಾರು 140 ಮಿಲಿಯನ್ ಉಕ್ಕಿನ ತೇವವನ್ನು ಉತ್ಪಾದಿಸುತ್ತದೆ. ಕರ್ನಾಟಕವು 22% ರಷ್ಟು ಕೊಡುಗೆ ನೀಡುತ್ತದೆ. ಆದ್ದರಿಂದ ಕರ್ನಾಟಕವು ಉತ್ತಮ ಸಾಮರ್ಥ್ಯವನ್ನು ಪಡೆದುಕೊಂಡಿದೆ, ಸುಮಾರು 750 ಬಹುರಾಷ್ಟ್ರೀಯ ಹಾಗೂ 5580 ಐಟಿ ಕಂಪನಿಗಳು ನಮ್ಮಲ್ಲಿವೆ. ನಮ್ಮಲ್ಲಿ 57 ವೈದ್ಯಕೀಯ ಕಾಲೇಜುಗಳು, 257 ಎಂಜಿನಿಯರಿಂಗ್ ಕಾಲೇಜುಗಳು ಇವೆ. ಈ ಎಲ್ಲ ಅಂಶಗಳಿಂದ ಕರ್ನಾಟಕವು ಕೌಶಲ್ಯದ ಬೀಡಾಗಿದೆ. ಆದ್ದರಿಂದ ಮುಂದಿನ ಭವಿಷ್ಯಕ್ಕೆ ತಾವು ಕರ್ನಾಟಕಕ್ಕೆ ಬಂದಲ್ಲಿ ಅತೀ ಹೆಚ್ಚು ಉದ್ಯೋಗ ಅವಕಾಶಗಳು ಸಿಗುತ್ತವೆ, ಉತ್ತಮ ವ್ಯಾಪಾರ ಅಭಿವೃದ್ಧಿ ಹೊಂದಬಹುದು. ಕರ್ನಾಟಕದಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೂಲಭೂತವಾಗಿ ನಾವು 5 ಕಾರ್ಯಕ್ರಮಗಳನ್ನು ಮಾಡಿದ್ದೇವೆ, ಇವು ರಾಜ್ಯದ ಜೀವನಕ್ಕೆ ಆಧಾರ ಸ್ತಂಭಗಳಾಗಿವೆ. ಈ ಯೋಜನೆಗಳಿಗೆ ನಮ್ಮ ಸರ್ಕಾರವು ವರ್ಷಕ್ಕೆ ಸುಮಾರು 12 ಬಿಲಿಯನ್ ಡಾಲರಗಳನ್ನು ಖರ್ಚು ಮಾಡುತ್ತಿದ್ದೇವೆ. ಇದನ್ನು ಸಾಮಾನ್ಯರಿಗೆ ಸಾಮಾಜಿಕ ಭದ್ರತೆಯಾಗಿ ನೀಡಲಾಗುತ್ತಿದೆ. ಆದ್ದರಿಂದ ನಮ್ಮ GDPS ಹೆಚ್ಚಾಯಿತು. ಇದೊಂದು ಅದ್ಬುತ ಕಾರ್ಯಕ್ರಮವಾಗಿದೆ, ಈ ಕಾರ್ಯಕ್ರಮದಿಂದ ಜಗತ್ತೇ ಕರ್ನಾಟಕದತ್ತ ನೋಡುತ್ತಿದೆ. ಇದರಲ್ಲಿ ನಾವು ಕರ್ನಾಟಕದಲ್ಲಿ 70 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದ್ದೇವೆ ಅದರಲ್ಲಿ 40 ಮಿಲಿಯನ್ ಕುಟುಂಬಗಳಿಗೆ ಈ 5 ಕಾರ್ಯಕ್ರಮಗಳನ್ನು ನೀಡಲಾಗಿದೆ, ಇದರಲ್ಲಿ ಇಂದು ಕರ್ನಾಟಕ ರಾಜ್ಯವು ಜಿಡಿಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧನ್ಯವಾದ ಹೇಳಿದರು. ಆದ್ದರಿಂದ ಭವಿಷ್ಯದಲ್ಲಿ, ಹಲವಾರು ಪ್ರಜಾಪ್ರಭುತ್ವ ರಾಷ್ಟ್ರಗಳು ಇರುವುದರಿಂದ ನಾವು ಈ ಕಾರ್ಯಕ್ರಮವನ್ನು ನೋಡಬಹುದು ತುಂಬಾ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ವಿವಿಧ ದೇಶಗಳ ರಾಜಕೀಯ ಮುಖಂಡರು, ತಜ್ಞರು, ಉದ್ಯಮಿಗಳು, ವ್ಯಾಪಾರಿ ಪರಿಣಿತರು ಭಾಗವಹಿಸಿದ್ದರು.
ಕನ್ನಡ ಅನುವಾದ - ವಿನಾಯಕ ಭಟ್ ಹುಲ್ಲಂಬಿ














