Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ರಾಷ್ಟ್ರೀಯ ಮಟ್ಟಕ್ಕೆ ಉಗ್ಗಿನಕೇರಿ ಗ್ರಾಮದ ಕ್ರೀಡಾ ವಿದ್ಯಾರ್ಥಿಗಳು

ರಾಷ್ಟ್ರೀಯ ಮಟ್ಟಕ್ಕೆ ಉಗ್ಗಿನಕೇರಿ ಗ್ರಾಮದ ಕ್ರೀಡಾ ವಿದ್ಯಾರ್ಥಿಗಳು



Author : Vinayak M Bhat

ರಾಜ್ಯ ಮಟ್ಟದ ಕನಕಪುರದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಉಗ್ಗಿನಕೇರಿ ಗ್ರಾಮದ ವಿದ್ಯಾರ್ಥಿ - ವಿದ್ಯಾರ್ಥಿನಿಯರು ಕುಸ್ತಿ ಹಾಗೂ ವೇಟ್ ಲಿಫ್ಟಿಂಗ್‌(ಭಾರ ಎತ್ತುವ) ಸ್ಪರ್ಧೆಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ಬಿ.ಗುಡಿಹಾಳ ಗ್ರಾಮದ 10ನೇ ತರಗತಿಯ ವಿದ್ಯಾರ್ಥಿನಿ ಕಾವ್ಯ ತುಕಾರಾಮ ದಾನ್ವೇನವರ 53 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ, ಉಗ್ಗಿನಕೇರಿ ಗ್ರಾಮದ 9 ನೇ ತರಗತಿಯ ವಿದ್ಯಾರ್ಥಿ ಸುನೀಲ್‌ ರಾಮಣ್ಣ ಬಂಡಿವಡ್ಡರ 74 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ತೃತಿಯ ಸ್ಥಾನ ಪಡೆದಿರುತ್ತಾರೆ. ಮಂಗಳೂರಿನಲ್ಲಿ ನಡೆದ ಉಗ್ಗಿನಕೇರಿ ಗ್ರಾಮದ 10 ನೇ ತರಗತಿ ವಿದ್ಯಾರ್ಥಿ ಅಭಿಷೇಕ್‌ ಗುರುಸಿದ್ದಪ್ಪ ಧೂಳಿಕೊಪ್ಪ 55 ಕೆ.ಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ದ್ವಿತಿಯ ಬಹುಮಾನ ಪಡೆದಿದ್ದಾರೆ. ಈ ಮೂರು ವಿದ್ಯಾರ್ಥಿಗಳು ದೆಹಲಿಯಲ್ಲಿ ನಡೆಯುವ ಕ್ರೀಡಾಕೂಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಉಗ್ಗಿನಕೇರಿ ಗ್ರಾಮದ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಅಳಗೋಡಿ ತಿಳಿಸಿದ್ದಾರೆ. ಇದೇ ರೀತಿ ಭಾರ ಎತ್ತುವ ಸ್ಪರ್ಧೆಯಲ್ಲಿ 55 ಕೆಜಿ ವಿಭಾಗಕ್ಕೆ ಶ್ರವಣ ಮಂಜುನಾಥ ಮುಕ್ಕಲ್‌, 59 ಕೆಜಿ ಭಾರ ಎತ್ತುವ ಸ್ಫರ್ಧೆಯಲ್ಲಿ ವಂದನಾ ಬಸನಗೌಡ ಗುಡ್ಡದ ಹೂಲಿಕಟ್ಟಿ, 76 ಕೆಜಿ ಭಾರ ಎತ್ತುವ ವಿಭಾಗದಲ್ಲಿ ಲಕ್ಷ್ಮೀ ಚನ್ನಪ್ಪ ಕುಂದಗೋಳ ಇವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದು ಕ್ರೀಡಾ ಶಿಕ್ಷಕ ರವೀಂದ್ರನಾಥ ಹೋಳಿ ತಿಳಿಸಿದ್ದಾರೆ. 

 

ಉಗ್ಗಿನಕೇರಿ ಸರ್ಕಾರಿ ಪ್ರೌಢ ಶಾಲೆಯ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯತಿಯ ಅದ್ಯಕ್ಷ- ಉಪಾಧ್ಯಕ್ಷ ಹಾಗೂ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು , ಊರ ನಾಗರಿಕರು, ಪಾಲಕರು ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲ ಮಕ್ಕಳಿಗೆ ಹಾಗೂ ಈ ಗುರಿ ಮುಟ್ಟಲು ಕಾರಣರಾದ ಗುರು ವೃಂದಕ್ಕೆ ಧನ್ಯವಾದ ಹಾಗೂ ಹರ್ಷ ವ್ಯಕ್ತಪಡಿಸಿದ್ದಾರೆ. ಬರುವ ನವ್ಹೆಂಬರ 01 ಕನ್ನಡ ರಾಜ್ಯೋತ್ಸವದಂದು ಮಕ್ಕಳಿಗೆ  ಸನ್ಮಾನ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ಕೋಟ್‌

      “ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ತೊಟ್ಟಿಲ ನಾಡು ಕಲಘಟಗಿ ತಾಲೂಕನ್ನು ಶೈಕ್ಷಣಿಕವಾಗಿ ಹಾಗೂ ಸದೃಡ ಆರೋಗ್ಯವಂತ ಭಾರತ ಪ್ರಜೆಗಳನ್ನಾಗಿಸುವುದು ನನ್ನ ಪುಟ್ಟ ಕನಸು”  

                                                                                                                                                                                                                                                                                                                                                           ಚಂದ್ರಶೇಖರ ಅಳಗೋಡಿ   

                                                                                                                                                                                                                                                                                                                                                       ಶಾಲಾ ಮುಖ್ಯೋಪಾಧ್ಯಾಯರು