Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಕರಾಟೆ ಮಹಿಳಾ ತಂಡಕ್ಕೆ ವಿಜಯಲಕ್ಷ್ಮಿ ಆಯ್ಕೆ

ಕರಾಟೆ ಮಹಿಳಾ ತಂಡಕ್ಕೆ ವಿಜಯಲಕ್ಷ್ಮಿ ಆಯ್ಕೆ



Author : Vinayak M Bhat

ಕಲಘಟಗಿ: ತಾಲೂಕಿನ ದಾಸ್ತಿಕೋಪ್ಪ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕು.ವಿಜಯಲಕ್ಷ್ಮಿ ಸಹದೇವ ಹರಮಣ್ಣವರ, 2025-26 ನೇ ಸಾಲಿಗೆ ಕರ್ನಾಟಕ ವಿಶ್ವವಿದ್ಯಾಲಯದ ಮಹಿಳಾ ಕರಾಟೆ ತಂಡಕ್ಕೆ ಆಯ್ಕೆಯಾಗಿದ್ದಾರೆ. 

ಈ ಕುರಿತು ಕರ್ನಾಟಕ ವಿಶ್ವವಿದ್ಯಾಲಯ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ಇಲಾಖೆ , ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಆಯ್ಕೆಯಾಗಿದ್ದು. ಸರ್ಕಾರಿ ಪ್ರಥಮ ದರ್ಜೆ ಕಲಘಟಗಿ ಕಾಲೇಜಿನ ವಿದ್ಯಾರ್ಥಿನಿ , ಕರ್ನಾಟಕ ವಿಶ್ವವಿದ್ಯಾಲಯದ ಕರಾಟೆ (ಮಹಿಳಾ) ತಂಡವನ್ನು ನೈಋತ್ಯ ವಲಯ, ದಕ್ಷಿಣ ವಲಯ, ಅಖಿಲ ಭಾರತ, ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯು ಮಧ್ಯಪ್ರದೇಶದ ಭೂಪಾಲ ಸಗೇ ವಿಶ್ವವಿದ್ಯಾಲಯದಲ್ಲಿ  ಮಾರ್ಚ್ 17 ರಂದು ಜರುಗುವ ಕರಾಟೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರತಿನಿಧಿಸುತ್ತಾರೆ.   ಆಯ್ಕೆಯಾದ ವಿದ್ಯಾರ್ಥಿನಿಗೆ ಕಲಘಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಪೋಷಕರು ಶುಭ ಹಾರೈಸಿದ್ದಾರೆ.