Image
Breaking News
• ಮೋಹನ ಲಿಂಬಿಕಾಯಿ ಅವರನ್ನು ಗೆಲ್ಲಿಸಿ ಸಂತೋಷ ಲಾಡ್ ಅವರ ಕೈ ಬಲ ಪಡಿಸೋಣ ::ಮಂಜುನಾಥ ಮುರಳ್ಳಿ. • ರೈತ ಪರ ಹೋರಾಟ ಸೂಕ್ತ, ಸಮಯ ಬೇಕು :ಸುತಗಟ್ಟಿ. • ರೈತನಿಗೆ ಬರದಲ್ಲೂ ಬರೆ ಕೊಟ್ಟ ವರುಣ ದೇವ.ತಹಸೀಲ್ದಾರ್ ಬಸವರಾಜ್ ಹೊಂಕಣದವರ ಮತ್ತು ಸೋಮಶೇಖರ್ ಬೆನ್ನೂರ್ ತಂಡ ಭೇಟಿ.
21 Oct 2026 | 
ಕಲಘಟಗಿ ಗರ್ಲ್ಸ್ ಇಂಗ್ಲಿಷ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿ ಸಂಸತ್ತು 2026.

ಕಲಘಟಗಿ ಗರ್ಲ್ಸ್ ಇಂಗ್ಲಿಷ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿ ಸಂಸತ್ತು 2026.



Author : Vinayak M Bhat

1)ಮತಗಟ್ಟೆ ಅಧಿಕಾರಿ : ಸಿ ಎನ್. ಹಂಚಿನಮನಿ.

2)ಪೋಲಿಂಗ್ ಅಧಿಕಾರಿ :ಐಶ್ವರ್ಯ ಲಕ್ಷ್ಮೀ 

3) 27 ವಿದ್ಯಾರ್ಥಿನಿಯರು ಕಣದಲ್ಲಿ.

 

4)ಆರಕ್ಷಕ ಸಿಬ್ಬಂದಿಯಾಗಿ ಎನ್. ಸಿ. ಸಿ. ಕೇಡರನ ವಿದ್ಯಾರ್ಥಿನಿಯರು.

ತಾಲೂಕಿನ ಗರ್ಲ್ಸ್ ಇಂಗ್ಲಿಷ್ ಪ್ರೌಢ ಶಾಲೆ ಯಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಅರಿವು ಮೂಡಿಸಲು ವಿದ್ಯಾರ್ಥಿನಿ ಸಂಸತ್ತು 2026.ಚುನಾವಣೆ ನಡೆಸಲಾಯಿತು. ಶಾಲೆಯಲ್ಲಿ ಹಾಜರಿದ್ದ ಸುಮಾರು 259 ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಗುರುತಿನ ಚೀಟಿಗಳಾದ ಆದಾರ್ ಕಾರ್ಡ್ ಹಾಗೂ ಶಾಲೆಯ ಗುರುತಿನ ಚೀಟಿ ಮೂಲಕ ಬ್ಯಾಲೆಟ್ ಪೇಪರ್ ಪಡೆದುಕೊಂಡು ಗುಪ್ತ ಮತದಾನ ಅನುಸರಿಸಿ ಎಡಗೈ ತೋರು ಬೆರಳಿಗೆ ಮಸಿ ಟಿಕ್ಕಿ ಹಚ್ಚಿಕೊಂಡರು. ಒಟ್ಟು 27 ಅಭ್ಯರ್ಥಿಗಳು ಕಣದಲ್ಲಿದ್ದರು ಮತದಾನದ ನಂತರ ಮತಯಂತ್ರವನ್ನು ಸೆಕ್ಯೂರಿಟಿ ಗಾರ್ಡ್ ಮೂಲಕ ಭದ್ರವಾಗಿ ಇಟ್ಟರು.

ಸಿ ಎನ್ ಹಂಚಿನಮನಿಯವರು ಮತ ಎಣಿಕೆ ಜವಾಬ್ದಾರಿ ಹೊತ್ತಿದ್ದರು. ಪ್ರಧಾನಿ ಸ್ಥಾನಕ್ಕೆ 4ಅಭ್ಯರ್ಥಿಗಳಲ್ಲಿ ಪೈಪೋಟಿ ಇದ್ದು ಪ್ರಥ್ವಿ ಹರಿಜನ ಆಯ್ಕೆಯಾದರು, ಉಪ ಪ್ರಧಾನಿ ಯಾಗಿ ಗಾಯತ್ರಿ ಲಮಾಣಿ,  ನಿಶ್ಚಿತಾ ವಾಗ್ಮೊಡೆ ಅರ್ಪಿತಾ ಜಾಗಿನದಾರ (ಕೃಷಿ ) ಕಾವ್ಯ ಗೌಡ್ಮನಿ (ಕ್ರೀಡಾ ) ಹೀಗೆ ಎಲ್ಲಾ ಮಂತ್ರಿ ಮಂಡಲ ರಚನೆ ಮಾಡಿದರು.

ಈ ಸಂಧರ್ಭದಲ್ಲಿ ಮಾತನಾಡಿದ ವಿನಾಯಕ ಶೇಟ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಇದ್ದೇವೆ, ಮತದಾನ ನಮ್ಮ ಹಕ್ಕು ಎನ್ನುವದನ್ನು ಅರಿತುಕೊಳ್ಳಬೇಕು ಎಂದರು.ಶಾಲೆಯ ಎಲ್ಲ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಆಯ್ಕೆಯಾದ ಅಭ್ಯರ್ಥಿ ಗಳಿಗೆ ಪ್ರಮಾಣ ಪತ್ರ ನೀಡಲಾಯಿತು.