ಭಾರತವು ಮಹಿಳಾ ಪ್ರಧಾನ ಕೃಷಿ ದೇಶ :ಬಿ ಸಿ. ಪಾಟೀಲ.
Author : Vinayak M Bhat
ನಮ್ಮ ಭಾರತ ದೇಶವು ಮಹಿಳಾ ಪ್ರಧಾನ ಕೃಷಿ ದೇಶ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮುಖಂಡ ಬಿ. ಸಿ.ಪಾಟೀಲ ಹೇಳಿದರು.
ತಾಲೂಕಿನ ಧೂಳಿಕೊಪ್ಪ ಕ್ರಾಸ್ ಹತ್ತಿರ ಇರುವ ಸಿದ್ಧಾರೂಢ ಮಠದ ಆವರಣದಲ್ಲಿ ಮನುವಿಕಾಸ ಸಂಸ್ಥೆಯ ಜಲ, ಕೃಷಿ, ಸಮೃದ್ಧಿ ಯೋಜನೆಯ ಕ್ಷೇತ್ರೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯು ಸುಸ್ತಿ ರ ಕೃಷಿಗೆ ಅನೇಕ ಯೋಜನೆಗಳನ್ನು ನಮ್ಮ ತಾಲೂಕಿನಲ್ಲಿ ಹಮ್ಮಿಕೊಂಡಿದ್ದು ತಾವೆಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಿರಿ ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಕಾಂತ ಹೆಗಡೆ ಸಂಸ್ಥೆಯು ನೆಲ ಜಲ ಸಂರಕ್ಷಣೆಗೆ ತುಂಬಾ ಪ್ರಾಮುಖ್ಯತೆ ಕೊಟ್ಟಿದ್ದು 365ಕೆರೆ ಹೂಳು ತೆಗೆದಿದ್ದೇವೆ, ಈ ತಾಲೂಕಿನಲ್ಲಿ 80ಕೆರೆಗಳ ಹೂಳು ತೆಗೆದಿದ್ದೇವೆ, ಮುಂದಿನ ದಿನಗಳಲ್ಲಿ ಮಹಿಳೆಯರ ಕೌಶಲ್ಯ ಅಭಿವೃದ್ಧಿ ಯ ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತೇವೆ ಎಂದರು.ಸಂಸ್ಥೆಯ ಯೋಜನೆ ಅಧಿಕಾರಿ ಸುನಿಲ್ ಪೂಜಾರ್ ಮಾತನಾಡಿ ಕೊಳವೆ ಬಾವಿಗಳ ಜಲ ಮರುಪೂರ್ಣ,ಹೊಸ ಮಹಿಳಾ ಸಂಘ ಸ್ಥಾಪಿಸುತ್ತೇವೆಎಂದರು.ಹೊಸ ಧಾರವಾಡದ ಕೃಷಿ ಇಲಾಖೆಯ ವಿಜ್ಞಾನಿ ಶ್ರೀಮತಿ ಪಲ್ಲವಿ, ಕಲಘಟಗಿ ಸಹಾಯಕ ತೋಟಗಾರಿಕೆ ಅಧಿಕಾರಿ ಶ್ರೀಮತಿ ಶಕುಂತಲಾ, ನಿವೃತ್ತ ಕೃಷಿ ಅಧಿಕಾರಿ ಎಂ ಸಿ ದೇವಿಕೊಪ್ಪ,ಶಿವಪ್ಪ ಕುಡುಭಾವಿ,ವಿನಾಯಕ ಭಟ್ಟ,ಸಾವಯವ ಕೃಷಿಕ ಪರಶುರಾಮ್ ಯತ್ತಿನಗುಡ್ಡಮಾತನಾಡಿದರು.ಈ ಸಂಧರ್ಭ ದಲ್ಲಿ ಕೊಳವೆ ಬಾವಿ ಜಲ ಮರುಪೂರ್ಣ ಪ್ರಾತ್ಯಕ್ಷಿಕೆಗೆ ಭೇಟಿ ನೀಡಿದರು.

ಈ ಸಂಧರ್ಭದಲ್ಲಿ ಬೇಗೂರ ಗ್ರಾ ಪಂ ಅಧ್ಯಕ್ಷ ಗುರುನಾಥ ಸಾದರ, ಗ್ರಾ ಪಂ ಸದಸ್ಯರಾದ ರಾಚಪ್ಪ ಬಿಸರಳ್ಳಿ, ಕಲ್ಲಪ್ಪ ಮುಕ್ಕಲಕಟ್ಟಿ ಯುವ ಮುಖಂಡ ಚೆನ್ನಬಸಪ್ಪ ಶಿಗ್ಗಟ್ಟಿ, ನಿಂಗಪ್ಪ ಸುತಗಟ್ಟಿ,ಕುಬೇರಗೌಡ್ರು ಪಾಟೀಲ,ಸಂಸ್ಥೆಯ ಪದಾಧಿಕಾರಿಗಳು, ಹುಲ್ಲಂಬಿ, ಬೆಲವಂತರ, ತುಮರಿಕೊಪ್ಪ, ಬಿಸರಳ್ಳಿ ಗ್ರಾಮಗಳ 300ಕ್ಕೂ ಹೆಚ್ಚು ರೈತರು ಮಹಿಳೆಯರು ಪಾಲ್ಗೊಂಡಿದ್ದರು. ರಾಜೇಶ್ ಸ್ವಾಮೀಜಿ ಸಾನಿಧ್ಯ, ಕು. ಗೀತಾ ನಿಲೇಕಣಿ ನಿರೂಪಿಸಿದರು.ನಾಗರಾಜ ಆಯೋಜನೆ ಮಾಡಿದರು.













