Image
Breaking News
• ಮೋಹನ ಲಿಂಬಿಕಾಯಿ ಅವರನ್ನು ಗೆಲ್ಲಿಸಿ ಸಂತೋಷ ಲಾಡ್ ಅವರ ಕೈ ಬಲ ಪಡಿಸೋಣ ::ಮಂಜುನಾಥ ಮುರಳ್ಳಿ. • ರೈತ ಪರ ಹೋರಾಟ ಸೂಕ್ತ, ಸಮಯ ಬೇಕು :ಸುತಗಟ್ಟಿ. • ರೈತನಿಗೆ ಬರದಲ್ಲೂ ಬರೆ ಕೊಟ್ಟ ವರುಣ ದೇವ.ತಹಸೀಲ್ದಾರ್ ಬಸವರಾಜ್ ಹೊಂಕಣದವರ ಮತ್ತು ಸೋಮಶೇಖರ್ ಬೆನ್ನೂರ್ ತಂಡ ಭೇಟಿ.
21 Oct 2026 | 
ಸೆ. 29ರಂದು ಬೃಹತ್ ರೈತರ ಹೋರಾಟ :ಪೂಜಾರಿ

ಸೆ. 29ರಂದು ಬೃಹತ್ ರೈತರ ಹೋರಾಟ :ಪೂಜಾರಿ



Author : Vinayak M Bhat

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ರೈತರ ನಡೆ ಕೇಂದ್ರ ಸಚಿವರ ಮನೆ ಕಡೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚುನಪ್ಪ ಪೂಜಾರಿ ಹೇಳಿದರು.

ಪಟ್ಟಣದ ಹನ್ನೆರಡು ಮಠದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಇದು ಕೇವಲ ರಾಜ್ಯದ ರೈತರ ಹೋರಾಟ ಅಲ್ಲ, ಇಡಿ ದೇಶದ ರೈತರ ಒಳಿತಿನ ಹೋರಾಟ, ಅನೇಕ ರಾಜ್ಯಗಳಿಂದ ಲಕ್ಷ ಲಕ್ಷ ರೈತರು ಇದರಲ್ಲಿ ಭಾಗವಹಿಸುತ್ತಿದ್ದಾರೆ, ರೈತನ ಬೆವರಿಗೆ ಯೋಗ್ಯ ಬೆಲೆ ನೀಡಿ, ಕಬ್ಬು, ಭತ್ತ, ಗೋವಿನ ಜೋಳ ಮುಂತಾದ ಬೆಳೆಗಳನ್ನು ಗಮನದಲ್ಲಿಟ್ಟು ಇಥನಾಲ್ ಉತ್ಪಾದನೆ ಯಲ್ಲಿ ಯಾವುದೇ ಷರತ್ತು ವಿಧಿಸದೇ ಪ್ರೋತ್ಸಾಹಿಸಬೇಕು, ವಿ ಬಿ ಜಿ ರಾಮ್ ಜಿ ಯೋಜನೆಯನ್ನು ಕೃಷಿ ಚಟುವಟಿಕೆಗಳಿಗೆ ಅಳವಡಿಸಬೇಕು,ಮುಂತಾದ ವಿಷಯ ಕುರಿತು ಕೃಷಿ ವಲಯ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ, ರೈತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.

ಈ ಸಂಧರ್ಭದಲ್ಲಿ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ನಾಗೇಶ ಇಟಗಿ,ಪ್ರಕಾಶ್ ನಾಯಕ,ಕಿಶನ್ ನಂದಿ, ಸಿದ್ದು ಬೆಣ್ಣಿ, ಜ್ಯೋತಿಬಾ ಹುಲಕೊಪ್ಪ, ಮಂಜುನಾಥ ಹೊಸಮನಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ತಾಲೂಕಾ ಪದಾಧಿಕಾರಿಗಳು, ರೈತ ಪರ ಹೋರಾಟಗಾರರು ಉಪಸ್ಥಿತರಿದ್ದರು.