ಪರಿಸರದ ಸ್ವಚ್ಛತೆ ಮನುಷ್ಯನ ಉತ್ತಮ ಆರೋಗ್ಯದ ಮೂಲ ಮಂತ್ರ: ಬಿ ಚಂದ್ರಶೇಖರ.
Author : Vinayak M Bhat
ನಮ್ಮ ಪರಿಸರದ ಸ್ವಚ್ಛತೆ ಮನುಷ್ಯ ಜನಾಂಗದ ಮೂಲ ಮಂತ್ರ ಎಂದು ಪಟ್ಟಣ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಬಿ ಚಂದ್ರಶೇಖರ ಹೇಳಿದರು.
ಸ್ವಚ್ಛತೆಯೇ ಸೇವೆ ಅಭಿಯಾನ 2026.
ಕಲಘಟಗಿಯ ಪಟ್ಟಣ ಪಂಚಾಯತ್ ಕಾರ್ಯಲಯ ಹಾಗೂ ಕಂದಾಯ ಇಲಾಖೆಗಳ ಸಹಭಾಗಿತ್ವದಲ್ಲಿ ಸ್ವಚ್ಛತೆಯಲ್ಲಿ ಸಹಭಾಗಿತ್ವ, ಸ್ವಚ್ಛ ಭಾರತ ವಿಕಸಿತ ಭಾರತ ಅಭಿಯಾನದಲ್ಲಿ ಮಾತನಾಡಿದರು.
ತಹಶೀಲ್ದಾರ್ ಬಸವರಾಜ್ ಹೊಂಕಣದವರ ಮಾತನಾಡಿ ಇಂದು ನಮ್ಮಿಂದ ನಾವೇ ಪರಿಸರ ಹಾಳು ಮಾಡಿಕೊಂಡು ಅನಾರೋಗ್ಯಕ್ಕೆ ಈಡಾಗುತ್ತಿದ್ದೇವೆ ಎಲ್ಲೆಂದರಲ್ಲಿ ಎಂಜಲು ಉಗುಳುವದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವದು, ಇದರಿಂದ ನಮ್ಮಿಂದ ನಾವೇ ಅನಾರೋಗ್ಯಕ್ಕೆ ತುತ್ತಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದೇವೆ, ಇದೊಂದು ಅಭಿಯಾನ ಅಷ್ಟೇ ಆದರೆ ಇದರ ಹೊಣೆಗಾರಿಕೆ ನಮ್ಮ ಮೇಲೆ ನಿರಂತರ ಇರುತ್ತದೆ ಎಂದರು, ಹಾಗೂ ಗಾಂಧಿ ಜಯಂತಿ ಯ ಶುಭಾಶಯ ಕೋರಿದರು.
ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತ್ ಸಿಬ್ಬಂದಿ, ಪೌರ ಕಾರ್ಮಿಕರು ನಾಗರಿಕರು ಉಪಸ್ಥಿತರಿದ್ದರು.













