ಇಂದು ಸಂಜೆ ಮಹಾಶಕ್ತಿ ಮಹಾಕಾಳಿ ಯಕ್ಷಗಾನ (ಜನತಾ ಇಂಗ್ಲಿಷ್ ಸ್ಕೂಲ್ ಸಭಾಭಾವನದಲ್ಲಿ )
Author : Vinayak M Bhat
ಯಕ್ಷಲೋಕದ ಯಕ್ಷಗಾನಕಲೆ ತೊಟ್ಟಿಲು ನಗರಿ ಕಲಘಟಗಿಯಲ್ಲಿ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ (ರಿ )ಹಾಲಾಡಿ ಇವರಿಂದ ಸಂಜೆ 6 ಘಂಟೆಗೆ ಮಹಾಶಕ್ತಿ ಮಹಾಕಾಳಿ ಯಕ್ಷಗಾನ ಜರುಗಲಿದೆ,
ಉದ್ಘಾಟಕರಾಗಿ ಮಾನ್ಯ ಕಾರ್ಮಿಕ ಸಚಿವ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್ ಲಾಡ್, ಅಧ್ಯಕ್ಷರಾಗಿ ಧಾರವಾಡ ಯಕ್ಷಗಾನ ಸಂಸ್ಕೃತಿ ಅಧ್ಯಕ್ಷ ಮತ್ತು ನ್ಯಾಯವಾದಿ ಎಸ್ ಆರ್ ಹೆಗಡೆ, ಥೈ ಥೆ ಮುಖ್ಯ ಅತಿಥಿಗಳಾಗಿ ಉದ್ದಿಮೆದಾರ ಶಿವರುದ್ರ ಗೋಕುಲ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಕಲಘಟಗಿ ಶಿಕ್ಷಣ ಸಮೀತಿ ಅಧ್ಯಕ್ಷ ನಂದೀಶ್ ಎಚ್ ಪಾಟೀಲ ಮುಂತಾದವರು ಉಪಸ್ಥಿತರಿರಲಿದ್ದಾರೆ,
ಜಿ ರಾಘವೇಂದ್ರಮಯ್ಯ್ ಹಾಲಾಡಿ, ಉಮೇಶ್ ಮರಾಠೆ,ಭಾಗವತರಾಗಿ, ಕಡತೋಕಾದ ರಮೇಶ ಭಂಡಾರಿ ಮದ್ದಳೆ, ಸುಬ್ರಮಣ್ಯ ಮೂರೂರು ಚಂಡೆ ವಾದ್ಯ ನುಡಿಸಲಿದ್ದಾರೆ,

ಪಾತ್ರಧಾರಿಗಳಾಗಿ ಕೋಡಿ ವಿಶ್ವನಾಥ ಗಾಣಿಗ,ಪ್ರಸಕ್ತ ಸಾಲಿನ ರಾಜ್ಯೋತ್ಸವ ಪುರಸ್ಕೃತರಾದ ಕೋಟಾ ಸುರೇಶ ಬಂಗೇರಾ, ಮತ್ತು ರಾಜೇಶ್ ಬೈಕಾಡಿ, ಯುವರಾಜ ನಾಯ್ಕ ಹಾರ್ಸಿಕಟ್ಟಾ , ಸಂದೀಪ್ ಮದ್ದೂರು,ಮುಂತಾದ ಅನುಭವಿ ಯಕ್ಷಗಾನ ಕಲಾವಿಧರು ನಡೆಸಿಕೊಡಲಿದ್ದಾರೆ,
ಹೋಟೆಲ್ ಉದ್ದಿಮೆದಾರರು,ಕರಾವಳಿ ಮತ್ತು ಕಲಘಟಗಿ ಯಕ್ಷಗಾನ ಆಡಳಿತ ಮಂಡಳಿ, ಕಲಘಟಗಿ ಶಿಕ್ಷಣ ಸಮೀತಿ, ಕಲಘಟಗಿ ವಕೀಲರ ಸಂಘ, ಸಿ ಕರುಣಾಕರ ಶೆಟ್ಟಿ, ಎಚ್ ರಘುರಾಮ ಶೆಟ್ಟಿ, ಭೋಜರಾಜ ಶೆಟ್ಟಿ ಪತ್ರಕರ್ತ ಪ್ರಭಾಕರ ನಾಯಕ ಸ್ವಾಗತ ಕೋರಿದ್ದಾರೆ.














