ರೈತನಿಗೆ ಬರದಲ್ಲೂ ಬರೆ ಕೊಟ್ಟ ವರುಣ ದೇವ.ತಹಸೀಲ್ದಾರ್ ಬಸವರಾಜ್ ಹೊಂಕಣದವರ ಮತ್ತು ಸೋಮಶೇಖರ್ ಬೆನ್ನೂರ್ ತಂಡ ಭೇಟಿ.
Author : Vinayak M Bhat
ಕಲಘಟಗಿ ಕ್ಷೇತ್ರದಲ್ಲಿ ಕೇವಲ ಒಂದು ಘಂಟೆ ಸುರಿದ ಹಿಂಗಾರು ಮಳೆ ಅನೇಕ ಆವಾಂತರ ಮಾಡಿದೆ.ರೈತನ ಬಾಳಿಗೆ ಆಸರೆಯಾಗಬೇಕಾದ ಕಬ್ಬು ಗೋವಿನ ಜೋಳದ ಬೆಳೆಗಳು ಇನ್ನಿಲ್ಲದಂತೆ ನೆಲಕ್ಕೆ ಉರುಳಿವೆ.ಪಟ್ಟಣ ಸೇರಿದಂತೆ ದಾಸ್ತಿಕೊಪ್ಪ, ಹಿರೇಹೊನ್ನಿಹಳ್ಳಿ, ಹಾರೂಗೇರಿ ಸುತ್ತಮುತ್ತಲಿನ ಕ್ಷೇತ್ರದಲ್ಲಿ ಅವಾಂತರ ಸೃಷ್ಟಿಸಿದೆ,ಹಾರೊಗೇರಿ ಗ್ರಾಮದ ಪಾರವ್ವ ವಾಲಿಕಾರ ವಾಸಿಸುವ ಕುಟುಂಬದ ಮನೆ ಗೋಡೆ ಬಿದ್ದಿದೆ, ರಾಮನಾಳ ಗ್ರಾಮದ ಚಂದ್ರಪ್ಪ ದೊಡಮನಿ ಅವರ ಮನೆ ಮೆಲ್ಚಾವಣಿ ಹಾರಿಹೋಗಿದೆ, ಕಾಮಧೇನು ಬಗಡಗೇರಿ ಸಂಪರ್ಕಿಸುವ ರಸ್ತೆ ಮಧ್ಯೆ ವಿದ್ಯುತ್ ಕಂಬ, ಮರಗಳು ಉರುಳಿ ಜನಜೀವನ ಅಸ್ತವ್ಯಸ್ತ ಉಂಟಾಗಿತ್ತು,
ತಾಲೂಕು ತಹಸೀಲ್ದಾರ್ ಬಸವರಾಜ್ ಹೊಂಕಣದವರ ಕಂದಾಯ ಇಲಾಖೆ ತಂಡದೊಂದಿಗೆ ಭೇಟಿ ನೀಡಿ ನಿಯಮಾ ನುಸಾರ ಪರಿಹಾರ ಕ್ರಮ ಕೈಗೊಳ್ಳುವದಾಗಿ ಹೇಳಿದರು.

ಈ ಸಂಧರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸೋಮಶೇಖರ್ ಬೆನ್ನೂರು, ರೈತ ಬಳಗ, ರೈ. ಸಂ ಕೇಂದ್ರದ ಅಧಿಕಾರಿ ಮಂಜುಳಾ ದೇವಲಾಪುರ, ಆಕಾಶ ಪಾಟೀಲ ಮುಂತಾದವರು ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದರು.













