Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಸುಕ್ಷೇತ್ರ  ಧರ್ಮಸ್ಥಳಕ್ಕೆ ಕಳಂಕ  ತರಬೇಡಿ : ಪಕ್ಷಾತೀತವಾಗಿ ಪ್ರತಿಭಟನೆ

ಸುಕ್ಷೇತ್ರ  ಧರ್ಮಸ್ಥಳಕ್ಕೆ ಕಳಂಕ  ತರಬೇಡಿ : ಪಕ್ಷಾತೀತವಾಗಿ ಪ್ರತಿಭಟನೆ



Author : Vinayak M Bhat

    ತಾಲೂಕಿನ ಎಲ್ಲ ಸಮಾಜದ ಹಾಗೂ ಎಲ್ಲ  ಪಕ್ಷದ ಮುಖಂಡರು ಸೇರಿ ಶ್ರೀ ಕ್ಷೇತ್ರದ ಅಪಪ್ರಚಾರ ಖಂಡಿಸಿ ಪಟ್ಟಣದಲ್ಲಿ  ಶಾಂತಿಯುತ ಪ್ರತಿಭಟನೆ ನಡೆಸಿದರು. ಶ್ರೀ ಧರ್ಮಸ್ಥಳ ಕ್ಷೇತ್ರವು  ಎಲ್ಲ ಧರ್ಮ ರಕ್ಷಣೆಯ ಕ್ಷೇತ್ರವಾಗಿದೆ.  ಆದಿ ಕಾಲದಿಂದಲೂ ಶ್ರೀ ಮಂಜುನಾಥ ಸ್ವಾಮಿಯನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತಿದ್ದಾರೆ.  ಹಾಗೂ ಭಕ್ತರ ಬೇಡಿಕೆ ಇಡೇರಿಸುವ ಧರ್ಮಕ್ಷೇತ್ರವಾಗಿದೆ. 800 ವರ್ಷಗಳ ಇತಿಹಾಸ ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ.  ಪ್ರತಿನಿತ್ಯವು ಸಾವಿರಾರು ಭಕ್ತರು  ಅನ್ನಪ್ರಸಾದ ಸ್ವೀಕರಿಸುತ್ತಾರೆ. ಆದರೆ ಇದರ ಹಿಂದೆ ದೊಡ್ಡ ಷಡ್ಯಂತ್ರ ಇದ್ದು,ಮಹೇಶ ಶೆಟ್ಟಿ ತಿಮ್ಮರೋಡಿ, ಜಯಂತ ಟಿ, ಗಿರೀಶ ಮಟ್ಟೆಣ್ಣವರ, ಸಂತೋಷ ಶೆಟ್ಟಿ, ಸಹಚರರು ಸೇರಿ ದೇವರ ಹಾಗೂ ಪೂಜ್ಯನೀಯರಾದ ಡಾ|ಡಿ.ವೀರೇಂದ್ರ ಹೆಗ್ಗಡೆ ಹೆಸರಿಗೆ ಕಳಂಕ ತರುವ  ದುಷ್ಟಕಾರ್ಯ ಮಾಡುತ್ತಿದ್ದಾರೆ. ದಿನ ನಿತ್ಯ ಇದೇ ಸುದ್ದಿಗಳು ಪ್ರಚಾರ ಪಡೆಯುತ್ತಿವೆ. ಅನಾಮಿಕ ವ್ಯಕ್ತಿ ನೀಡಿದ ದೂರಿನನ್ವಯ ಘನ ಕರ್ನಾಟಕ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ನಾವೆಲ್ಲರೂ ಗೌರವಿಸುತ್ತೇವೆ ಎಂದರು. 

ಪ್ರತಿಭಟನೆಯಲ್ಲಿ ಪಾತ್ರ ವಹಿಸಿದ್ದ  ಪಕ್ಕಿರೇಶ ನೇಸರೇಕರ, ಮಾಜಿ ಜಿ.ಪಂ ಸದಸ್ಯ ಆಯ.ಸಿ.ಗೋಕುಲ್‌,  ಮುಂತಾದವರು ಮಾತನಾಡಿದರು.  ಪಟ್ಟಣದ ಗ್ರಾಮದೇವಿ ದೇಗುಲದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಜೋಳದ ಓಣಿ, ಅಕ್ಕಿ ಓಣಿ, ಬಮ್ಮಿಗಟ್ಟಿ ರಸ್ತೆ, ಪ್ರಮುಖ ಬೀದಿಗಳ ಮೂಲಕ ಬಸ್‌ ನಿಲ್ದಾಣ, ಆಂಜನೇಯ ವೃತ್ತ , ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ಉಪ ತಹಶೀಲ್ದಾರ ಬಸವರಾಜ ಅಂಗಡಿಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸದಾನಂದ ಚಿಂತಾಮನಿ, ಸದಾಶಿವ ಹೆಗಡೆ, ಬಾಳು ಖಾನಾಪುರ, ಮಂಜುಳಾ ನಾಯಕ, ವೀರಣ್ಣ ಕುಬಸದ, ಸುರೇಶ ಮರಲಿಂಗನ್ನವರ,  ಸುಧೀರ ಬೋಳಾರ, ಪ್ರವೀಣ ಇಜಾರೆ, ರಾಕೇಶ  ಅಳಗವಾಡಿ, ಸದಾಶಿವ ಹೆಗಡೆ ಸಂತೋಷ ಮದನಬಾವಿ, ನ್ಯಾಯವಾದಿಗಳಾದ  ಅಣ್ಣಪ್ಪ ಓಲೇಕಾರ, ಕೆ.ಬಿ ಗುಡಿಹಾಳ, ಮಂಜುನಾಥ ಧನಿಗೊಂಡ ,ಹಾಗೂ ಜಯಪಾಲ ಬೆಟದೂರ,  ರುದ್ರಯ್ಯ ಚಿಕ್ಕಮಠ, ರಾಜು ಕಡಬಿ, ಶ್ರೇಣಿಕ್‌ ಕಡಬಿ, ವೃಷಬೇಂದ್ರ ಪಟ್ಟಣಶೆಟ್ಟಿ,  ರಾಜು ಪಟ್ಟಣಶೆಟ್ಟಿ, ಶ್ರೀಕಾಂತ ಡೊಂಗರೆ, ಪರಶುರಾಮ ಹುಲಿಹೊಂಡ, ಅರ್ಜುನ್‌ ಲಮಾಣಿ, ರಾಜು ಪಟ್ಟಣಶೆಟ್ಟಿ , ಕಿರಣ್‌ ಭಟ್‌, ಬಿ.ಯುವರಾಜ, ಸಂಗಮೇಶ ತೋಟಗಂಟಿ, ಅನುರಾಧ ಕಡಬಿ, ಪಲ್ಲವಿ ಶೆಟ್ಟೆಪ್ಪನವರ, ದೇವೆಂದ್ರಪ್ಪ ನವಲೂರ, ಪ್ರಭಾಕರ್‌ ನಾಯಕ, ಪಟ್ಟಣದ ಹಾಗೂ ಗ್ರಾಮಾಂತರದಿಂದ  ಆಗಮಿಸಿದ 500 ಕ್ಕೂ ಹೆಚ್ಚು ಮಹಿಳೆಯರು ಹಾಗೂ  ಭಕ್ತವೃಂದದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  ಸಿ.ಪಿ.ಆಯ್‌ ಶ್ರೀಶೈಲ್‌ ಕೌಜಲಗಿ, ಹಾಗೂ ಸಿಬ್ಬಂದಿ ವರ್ಗದವರು ಬಂದೋಬಸ್ತ ನಿರ್ವಹಿಸಿದರು.