ರೈತ ಪರ ಹೋರಾಟ ಸೂಕ್ತ, ಸಮಯ ಬೇಕು :ಸುತಗಟ್ಟಿ.
Author : Vinayak M Bhat
ರೈತ ಪರ ಹೋರಾಟ ಸೂಕ್ತವಿದೆ, ಸಮಯಾ ವಕಾಶ ಬೇಕು ಎಂದು ಧಾರವಾಡ ಜಿಲ್ಲಾ ಬಿ ಜೆಪಿ ಗ್ರಾಮಾಂತರ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.ಅನೇಕ ರಾಜ್ಯಗಳು ಎಸ್ ಎ ಪಿ (ಸ್ಟೇಟ್ ಎಡ್ವಾನ್ಸ್ ಪ್ರೈಸ್ )ದರವನ್ನು 300 ರಿಂದ 700 ರ ವರೆಗೆ ಕೊಡುತ್ತಿವೆ ಅದರಲ್ಲಿ ಅತೀ ಹೆಚ್ಚು 708 ದರವನ್ನು ತಮಿಳುನಾಡು ಕೊಡುತ್ತಿದೆ, ತೂಕದಲ್ಲಿ ಮೋಸ, ಮಷಿನ್ ಕಟಿಂಗ್ ನಲ್ಲಿ %8 ರಷ್ಟು ಕಡಿತ ಮಾಡುತ್ತಿವೆ ರಾಜ್ಯದಲ್ಲಿ ಸವದತ್ತಿಯಲ್ಲಿ ಒಂದೇ ಇದೆ,ಹೀಗಾಗಿ ಸಮಯದ ಅವಕಾಶ ಬೇಕು ಸಮೀತಿ ರಚನೆ ಮಾಡುತ್ತಿದ್ದಾರೆ ಎಂದರು. ಮಾಜಿ ಜಿ ಪಂ ಸದಸ್ಯ ಐ ಸಿ ಗೋಕುಲ ಮಾತನಾಡಿ ಇದರಲ್ಲಿ ರಾಜ್ಯ ಮತ್ತು ಕೇಂದ್ರದ ಸಹಭಾಗಿತ್ವ ಇರುತ್ತದೆ, ರೈತರ ಬೇಡಿಕೆ ಸೂಕ್ತ ಇದ್ದು ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ,ಆದರೆ ಮಾನ್ಯಪ್ರಲ್ಹಾದ ಜೋಶಿ ಒಬ್ಬರನ್ನೇ ದೂಶಿಸುವುದು ಸರಿ ಅಲ್ಲ, ರೈತರ ಹಿತ ಕಾಯುವದು ಎಲ್ಲರ ಕರ್ತವ್ಯ ಎಂದರು. ಸದಾನಂದ ಚಿಂತಾಮಣಿ ಮಾತನಾಡಿ ಈಗಾಗಲೇ ರೈತರು ರಾಜ್ಯದ್ಯಂತ ಹೋರಾಟ ಮಾಡಿದ್ದಾರೆ ಸೂಕ್ತ ಪರಿಹಾರ ಆದಷ್ಟು ಬೇಗನೇ ಸಿಗುತ್ತದೆ ಎಂದರು, ಬಿಜೆಪಿ ಮುಖಂಡ ಗುರುಸಿದ್ದಪ್ಪ ಕೆಲಗೇರಿ ಮಾತನಾಡಿ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ, ಫ್ಯಾಕ್ಟ್ರಿಗಳು ಶುರು ಆಗಿಲ್ಲ, ಅಲ್ಲಲ್ಲಿ ಕಬ್ಬು ಬೆಳೆ ಬೆಂಕಿಗೆ ಆಹುತಿ ಆಗುತ್ತಿವೆ, ರೈತ ಹಾಳಾಗುತ್ತಿದ್ದಾನೆ ಎಂದರು.
ಈ ಸಂಧರ್ಭದಲ್ಲಿ ತಾಲೂಕ ಬಿ ಜೆ ಪಿ ಅಧ್ಯಕ್ಷಯಲ್ಲಾರಿ ಶಿಂಧೆ,ಪರಶುರಾಮ ಹುಲಿಹೊಂಡ,ಶ್ರೀಧರ್ ದ್ಯಾಮಪ್ಪನವರ,ಶಿವಲಿಂಗಪ್ಪ ಜಕ್ಕಣ್ಣವರಉಪಸ್ಥಿತರಿದ್ದರು.ಸೋಮು ಕೊಪ್ಪದ ಸ್ವಾಗತಿಸಿದರು.













