Image
Breaking News
• ಮೋಹನ ಲಿಂಬಿಕಾಯಿ ಅವರನ್ನು ಗೆಲ್ಲಿಸಿ ಸಂತೋಷ ಲಾಡ್ ಅವರ ಕೈ ಬಲ ಪಡಿಸೋಣ ::ಮಂಜುನಾಥ ಮುರಳ್ಳಿ. • ರೈತ ಪರ ಹೋರಾಟ ಸೂಕ್ತ, ಸಮಯ ಬೇಕು :ಸುತಗಟ್ಟಿ. • ರೈತನಿಗೆ ಬರದಲ್ಲೂ ಬರೆ ಕೊಟ್ಟ ವರುಣ ದೇವ.ತಹಸೀಲ್ದಾರ್ ಬಸವರಾಜ್ ಹೊಂಕಣದವರ ಮತ್ತು ಸೋಮಶೇಖರ್ ಬೆನ್ನೂರ್ ತಂಡ ಭೇಟಿ.
21 Oct 2026 | 
ಮೋಹನ ಲಿಂಬಿಕಾಯಿ ಅವರನ್ನು ಗೆಲ್ಲಿಸಿ ಸಂತೋಷ ಲಾಡ್ ಅವರ ಕೈ ಬಲ ಪಡಿಸೋಣ ::ಮಂಜುನಾಥ ಮುರಳ್ಳಿ.

ಮೋಹನ ಲಿಂಬಿಕಾಯಿ ಅವರನ್ನು ಗೆಲ್ಲಿಸಿ ಸಂತೋಷ ಲಾಡ್ ಅವರ ಕೈ ಬಲ ಪಡಿಸೋಣ ::ಮಂಜುನಾಥ ಮುರಳ್ಳಿ.



Author : Vinayak M Bhat

ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರನ್ನು ಗೆಲ್ಲಿಸೋಣ, ಇದರಿಂದ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ನಾಯಕ ಸಚಿವ ಸಂತೋಷ ಲಾಡ್ ಅವರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಸಹಕಾರ ನೀಡಿದಂತೆ ಆಗುತ್ತದೆ ಎಂದು ಕಲಘಟಗಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ ಹೇಳಿದರು.

ಮಡಕಿಹೊನ್ನಳ್ಳಿಯ ಸಚಿವರ ಅಮೃತ ನಿವಾಸದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ಈ ಸಂಧರ್ಭದಲ್ಲಿ ವಿಡಿಯೋ ಕರೆ ಮೂಲಕ ಸಚಿವರೊಂದಿಗೆ ಸಂಭಾಷಣೆ ನಡೆಸಿ ಶುಭ ಹಾರೈಸಿದ ಸಚಿವರು ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ರೈತರ ಪ್ರತಿಭಟನೆಯಲ್ಲಿ  ಭಾಗವಹಿಸಲು ಹೋಗುತ್ತಿದ್ದೇನೆ ಕ್ಷಮೆ ಇರಲಿ, ತಾವೆಲ್ಲರೂ ಮಾನ್ಯ ಲಿಂಬಿಕಾಯಿ ಅವರಿಗೆ ಮೊದಲಿನ ಪ್ರಾಶಸ್ತ್ಯ ದ ಮತ ನೀಡಿರಿ ಇದರೊಂದಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.ನ್ಯಾಯವಾದಿ ಕೆ ಬಿ ಗುಡಿಹಾಳ ಮಾತನಾಡಿ ತಾವೆಲ್ಲರೂ ಪ್ರಜ್ಞಾವಂತರಿದ್ದೀರಿ ಮತದಾನ ಸಂಧರ್ಭ ದಲ್ಲಿ ನಿಯಮ ಪ್ರಕಾರ ಮಾಡಿರಿ ಎಂದರು.ಶಿವಪೂಜಿ ತಡಸಮಠ ಮಾತನಾಡಿದರು.

ಈ ಸಂಧರ್ಭದಲ್ಲಿಎಸ್ ಜಿ ಕುಲಕರ್ಣಿ,ಎಸ್ ಆರ್ ಪಾಟೀಲ, ಸೋಮಶೇಖರ ಬೆನ್ನೂರ ಬಾಳು ಖಾನಾಪುರ,ನ್ಯಾಯವಾದಿ ಮಂಜುನಾಥ್ ಧನಿಗೊಂಡ, ನಿಂಗಪ್ಪ ಬೆಳ್ಳಿವಾಲೆ,ಬಸಪ್ಪ ಬಾವಕರ,ಅಜಮತ್ ಜಹಗೀರ್ದಾರ ಶೋಭಾ ಮಾದರ, ಮಂಜುಳಾ ದೇವಲಾಪುರ, ಶಿವಲಿಂಗ ಮೂ ಗಣ್ಣವರ, ಮಂಜುನಾಥ್ ಮೂಗಣ್ಣವರ, ಯಲ್ಲಪ್ಪ ಚೌರಗಿಮುಂತಾದವರು ಉಪಸ್ಥಿತರಿದ್ದರು.