Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಸಚಿವರು ತಕ್ಷಣ ಸ್ಪಂದಿಸಿದ್ದಾರೆ _ ಮಂಜುನಾಥ ಮುರಳ್ಳಿ

ಸಚಿವರು ತಕ್ಷಣ ಸ್ಪಂದಿಸಿದ್ದಾರೆ _ ಮಂಜುನಾಥ ಮುರಳ್ಳಿ



Author : Vinayak M Bhat

 

 ಮುತ್ತಗಿ ಗ್ರಾಮದ ಕಲುಷಿತ ನೀರು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾದ ಕಾರಣ ತಕ್ಷಣವೇ ಸ್ಪಂದಿಸಿದ ಸಚಿವ ಸಂತೋಷ ಲಾಡ ಅವರು ಕೂಡಲೇ ಆಸ್ಪತ್ರೆಗೆ ತೆರಳಿ ಕ್ರಮ ಕೈಗೊಳ್ಳಲು ಸೂಚಿಸಿದರು ಎಂದು ಕಲಘಟಗಿ ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಅದ್ಯಕ್ಷ ಮಂಜುನಾಥ ಮುರಳ್ಳಿ ಹೇಳಿದರು. 

     ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತ ರೋಗಿಗಳನ್ನು  ಸಂಪರ್ಕಿಸಿ ಮಾತನಾಡಿದರು.  ಮಾನ್ಯ ಜಿಲ್ಲಾಧಿಕಾರಿಯವರು ತಮ್ಮ ಸಿಬ್ಬಂದಿಯವರೊಂದಿಗೆ ಮುತ್ತಗಿ ಗ್ರಾಮದಲ್ಲಿ ಪ್ರತಿ ಮನೆ ಮನೆಗೂ ತೆರಳಿ ಸಮಸ್ಯೆಯನ್ನು ವೀಕ್ಷಿಸಿ ನೀರು ಬಳಕೆಯ ಕುರಿತು ಜಾಗೃತಿ ಮೂಡಿಸಿದ್ದಾರೆ. ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ 24 ಘಂಟೆಯೂ ಸೇವೆಯಲ್ಲಿ ನಿರತರಾಗಿದ್ದಾರೆ. ಪರಿಸ್ಥಿತಿಯು ಸಂಪೂರ್ಣ ಹತೋಟಿಯಲ್ಲಿದ್ದು ಸ್ವಚ್ಛ ನೀರು ಪೂರೈಕೆಯ ಕುರಿತು ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ತಕ್ಷಣವೇ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪಾ ಟಿ.ಕೆಯವರು ಗ್ರಾಮ ಪಂಚಾಯತಿಯ ಪಿಡಿಓ ಪ್ರವೀಣಕುಮಾರ ಗಣಿಯವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಚಿವರ ಪರವಾಗಿ ಆಸ್ಪತ್ರೆಗೆ ದಾಖಲಾದ ಪ್ರತಿ ರೋಗಿಗೆ ತಲಾ 2000 ರೂಗಳ ಸಹಾಯ ಮಾಡಿದ್ದಾರೆ. 

   ಈ ಸಂದರ್ಭದಲ್ಲಿ ಸಚಿವರ ಆಪ್ತಕಾರ್ಯದರ್ಶಿಗಳಾದ ಹರೀಶಂಕರ ಮಠದ, ಸೋಮಶೇಖರ ಬೆನ್ನೂರ, ಎಸ್.ಆರ್.ಪಾಟೀಲ್‌, ಬಾಳು ಖಾನಾಪುರ, ಕುಮಾರ ಖಂಡೇಕರ್‌, ಅಜ್ಮತ್‌ ಜಹಗೀರದಾರ, ಶಂಕರ ದಾಸನಕೊಪ್ಪ, ಹನಮಂತ ಹರಿಜನ, ಹನಮಂತ ಚವರಗುಡ್ಡ, ನಿಂಗಪ್ಪ ಬೆಳ್ಳಿವಾಲೆ ಮುಂತಾದವರು ಉಪಸ್ಥಿತರಿದ್ದರು.