Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿ

ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿ



Author : Vinayak M Bhat

 

ವೀರಶೈವ ಧರ್ಮ ಸಂಸ್ಥಾಪಕರಾದ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು  ಬುಧವಾರ ದಿ. 12 ರಂದು ಪಟ್ಟಣದ ಹನ್ನೆರಡು ಮಠದಲ್ಲಿ ಆಯೋಜಿಸಲಾಗಿದೆ  ಎಂದು ಹಿರಿಯರಾದ ಎಸ್ ವಿ ತಡಸಮಠ ತಿಳಿಸಿದರು.

ಅವರು ಸೋಮವಾರ ಹನ್ನೆರಡು ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲ್ಗುಣ ಮಾಸ ಉತ್ತರಾಯಣ ತ್ರಯೋದಶಿ ತಿಥಿಯಂದು ಬೆಳಗಿನ ಬ್ರಾಹ್ಮ ಮುಹೂರ್ತದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳರುತಿ ಕಾರ್ಯಕ್ರಮ ಜರಗುವುದು.

ಬೆಳಿಗ್ಗೆ 9. ಘಂಟೆಗೆ ತಹಶೀಲ್ದಾರ ಕಛೇರಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಸಾಂಕೇತಿಕ ಪೂಜಾ ಕಾರ್ಯಕ್ರಮ ನೆರವೇರುವುದು. ನಂತರ ತಹಶೀಲ್ದಾರ ಕಛೇರಿಯಿಂದ ಮುತ್ತೈದೆಯರಿಂದ ಕುಂಭಮೇಳ, ಪುರವಂತರಿಂದ ವೀರಗಾಸೆ, ಕರಡಿಮಜಲು, ಜಾಂಜಮೇಳ ಹಾಗೂ ವಿವಿಧ ವಾಧ್ಯ ಮೇಳಗಳೊಂದಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರವನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಕಾಂತರ ಹನ್ನೆರಡು ಮಠಕ್ಕೆ ತಲುಪುವುದು.

ಮಧ್ಯಾಹ್ನ 12-00 ಘಂಟೆಗೆ ಧರ್ಮಸಭೆ ಹಮ್ಮಿಕೊಂಡಿದ್ದು ದಿವ್ಯಸಾನಿಧ್ಯವನ್ನು ಹನ್ನೆರಡುಮಠ ಶ್ರೀ ಷ. ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ತಿರುಮಲಕೊಪ್ಪ ರೇಣುಕ ಧರ್ಮನಿವಾಸದ  ದಾನಯ್ಯದೇವರು ಉಪದೇಶಾಮೃತ ನೀಡುವರು. ಜೆ. ಎಸ್.ಎಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ|| ರುದ್ರಗೌಡ ಪಾಟೀಲ ಉಪನ್ಯಾಸ ನೀಡುವರು .  ಮಧ್ಯಾಹ್ನ  1  ಘಂಟೆಗೆ ಮಹಾಪ್ರಸಾದ ಜರುಗುವುದು.  ಸಕಲ ಸದ್ಭಕ್ತರು ತನು,ಮನ,ಧನದಿಂದ ಸೇವೆಸಲ್ಲಿಸಿ ಶ್ರೀ ಗುರುವಿನ ಕೃಪೆಗೆ ಪಾತ್ರಾರಾಗಬೇಕಾಗಿ ವಿನಂತಿ.

ಈ ಸಂದರ್ಭದಲ್ಲಿ ಹನ್ನೆರಡು ಮಠದ ಶ್ರೀ ಷ.ಬ್ರ ರೇವಣಸಿದ್ಧ ಶಿವಾಚಾರ್ಯರು, ಸಮಾಜದ ಮುಖಂಡರಾದ ಎಸ್. ವಿ ತಡಸಮಠ, ಚನ್ನಯ್ಯ ಚಿಕ್ಕಮಠ, ಅಜ್ಜಯ್ಯ ಹಿರೇಮಠ, ಬಸಯ್ಯ ಹಿರೇಮಠ, ಮಹಾಲಿಂಗಯ್ಯ ಹಿರೇಮಠ, ಮಂಜಯ್ಯ ಅಣ್ಣಿಗೇರಿ, ಗಂಗಾಧರ್ ಚಿಕ್ಕಮಠ, ಶಂಕರಗೌಡ ಭಾವಿಕಟ್ಟಿ, ಶಿವಯ್ಯ ತೆಗೂರಮಠ,  ಚನ್ನಬಸಯ್ಯ ಚಿಕ್ಕಮಠ, ವಿರೇಶ ಹರೋಗೇರಿ, ಸಿದ್ದಯ್ಯ ಪಾಟೀಲ್, ಮಹಾಂತಯ್ಯ ಗುಡ್ಡದಮಠ, ಶಿವಪುತ್ರಯ್ಯ ತೆಗೂರಮಠ, ಗುರುಪಾದಯ್ಯ ಹಿರೇಮಠ, ಶೇಖಯ್ಯ ಬೆಂಡಿಗೇರಿಮಠ  ಸೇರಿದಂತೆ ಸಮಾಜದ ಮುಖಂಡರು ಇದ್ದರು.