Image
Breaking News
• ವಿಶೇಷ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಿ:ಪರಶುರಾಮ್ ಸಾವಂತ. • ನೇತ್ರದಾನ ಮಹಾದಾನ ಬಂಗಣೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡ ವಿತರಣೆ       • ದೇಶಾಭಿಮಾನ ಬೆಳೆಸಿಕೊಳ್ಳೋಣ ನಾಗರಾಜ ಛಬ್ಬಿ.
21 Aug 2026 | 
ಹಗಲು ವೇಷದ ನಾಟಕ ಬಿಡಿ: ಕುರುಬೂರ ಶಾಂತಕುಮಾರ

ಹಗಲು ವೇಷದ ನಾಟಕ ಬಿಡಿ: ಕುರುಬೂರ ಶಾಂತಕುಮಾರ



Author : Vinayak M Bhat

ಕಲಘಟಗಿ
 ಹಗಲು ವೇಷದ ನಾಟಕ ಬಿಡಿ, ರೈತರ ಸಂಕಷ್ಟ ಅರಿಯಿರಿ ಎಂದು ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತ ರತ್ನ ಕುರಬೂರ ಶಾಂತಕುಮಾರ ಹೇಳಿದರು. 
 ಕಲಘಟಗಿಯ ಎ.ಪಿ.ಎಂ.ಸಿಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದರು. ಸಂಕಷ್ಟದಲ್ಲಿರುವ ರೈತ ಸಮುದಾಯದ ಸಾಲ ಮನ್ನಾಕ್ಕೆ ಹಾಗೂ ಇತರ ಬೇಡಿಕೆಗಳಿಗೆ  ಒತ್ತಾಯಿಸಲು ಡಿಸೆಂಬರ್ 23 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಕಿಸಾನ್ ಮಹಾ ಪಂಚಾಯತ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ದೇಶದ ರಾಷ್ಟ್ರಿಯ ರೈತ ಮುಖಂಡರುಗಳು ಭಾಗವಹಿಸುತ್ತಿದ್ದಾರೆ. ರಾಜ್ಯದ ಎಲ್ಲ 223 ತಾಲೂಕುಗಳು ಬರಪೀಡಿತವಾಗಿವೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ 60 ವರ್ಷ ಪೂರೈಸಿದ ರೈತರಿಗೆ 5 ಸಾವಿರ ರೂ.ಪಿಂಚಣಿ, ಸಕ್ಕರೆ ಕಾರ್ಖಾನೆಗಳ ಕಾನೂನು ಬಾಃಇರ ಚಟುವಟಿಕೆ, ಕೃಷಿ ಪಂಪಸೆಟ್‍ಗಳಿಗೆ ಉಚಿತ ವಿದ್ಯುತ್, ರೈತರ ಗಂಡು ಮಕ್ಕಳನ್ನು(ಕೃಷಿಕನ) ಮದುವೆಯಾಗುವ ವಧುವಿಗೆ ಪ್ರೋತ್ಸಾಹ ಮುಂತಾದ ಬೇಡಿಕೆಗಳಿಗೆ ಅಧಿವೇಶನ ನಡೆಸುತ್ತಿದ್ದೇವೆ. ಮುಕ್ತ ಮನಸ್ಸಿನಿಂದ ಭಾಗವಹಿಸಿ ಸ್ವಯಂ ಪ್ರೇರಿತರಾಗಿ ಬಂದು ಯಶಸ್ವಿಗೊಳಿಸಲು ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರವಾಗಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಉಳವಪ್ಪ ಬಳಗೇರ, ಭುವನೇಶ್ವರ ಶಿಡ್ಲಾಪುರ, ವಾಸು ಡಾಕಪ್ಪನವರ, ಹತ್ತಳ್ಳಿ ದೇವರಾಜ ಬಸವರಾಜ ಸಿದ್ದನಗೌಡರ, ಮಹೇಶ್ ಬೆಳಗಾಂಕರ, ಪ್ರಕಾಶ್ ಬೆಂಚಳ್ಳಿ, ಸಹದೇವ ಮುಲ್ವಿ, ಶಿವಪುತ್ರಪ್ಪ ಬಸವನಕೊಪ್ಪ, ಪಂಚಯ್ಯ ಹಿರೇಮಠ, ಸಹದೇವ ಕುಂಬಾರ, ಮಂಜುನಾಥ ಕಾಸರ್, ಯಲ್ಲಪ್ಪ ಒಲೇಕರ್ ಮುಂತಾದವರು ಉಪಸ್ಥಿತರಿದ್ದರು.