ಹುಲ್ಲಂಬಿ ಗ್ರಾಮದಲ್ಲಿ ಕೊಲೆಗೆ ಯತ್ನ ಆರೋಪಿ ಬಂಧನ ಪ್ರಕರಣ ಭೇದಿಸಿದ ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿ
Author : Vinayak M Bhat

ಕಲಘಟಗಿ ತಾಲೂಕಿನ ಹುಲ್ಲಂಬಿ ಗ್ರಾಮದ ಶಿವಕುಮಾರ. ಫ. ಬಿಸರಳ್ಳಿ ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ತಮ್ಮ ದಿನನಿತ್ಯದ ಕೆಲಸ ಮುಗಿಸಿ (ರಾತ್ರಿ ಶಿಫ್ಟ್ ) ಮನೆಗೆ ಬಂದು ರಾತ್ರಿ ಒಂದು ಗಂಟೆ ಸುಮಾರಿಗೆ ಮಲಗಲು ಹೋದಾಗ ಒಂದು ಎಕ್ಸ್ಟೆಂಶನ್ ಬಾಕ್ಸ್ಗೆ ತಂತಿಯ ಸುರಳಿ ಸೇರಿಸಿ ವಿದ್ಯುತ್ ಸಂಪರ್ಕ ಕೊಟ್ಟಿದ್ದು ಮಲಗುವ ಸಂದರ್ಭದಲ್ಲಿ ಶಾಕ್ ನಿಂದ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ದೂರು ಕೊಟ್ಟ ಹಿನ್ನೆಲೆಯಲ್ಲಿ ಅಪರಾಧ ಸಂಖ್ಯೆ96/2025 ಕಲಂ:109(1) ಭಾರತೀಯ ನ್ಯಾಯ ಸಂಹಿತೆ 2023 ರ ಅಡಿ ಪ್ರಕರಣ ದಾಖಲೆ ದಾಖಲಿಸಿಕೊಂಡು ತನಿಖೆ ಕೈಕೊಂಡ ಸಿಬ್ಬಂದಿ ಇದೊಂದು ಅಕ್ರಮ ಸಂಬಂಧದ ಶಂಕೆ ಕಂಡುಬಂದಿದ್ದು ಬಂದಿತನಾದ ವೀರೇಶ್ ಹಾಗೂ ಶಿವಕುಮಾರನ ಪತ್ನಿ ಪರಸ್ಪರ ಸಂಬಂಧ ಹೊಂದಿದ್ದು, ಶಿವಕುಮಾರನ ಪತ್ನಿ ವಿರೋಧಿಸಿದರೂ ಲೆಕ್ಕಿಸದೆ ಕೊಲೆ ಯತ್ನಕ್ಕೆ ಮುಂದಾಗಿದ್ದ ಎಂದು ಪೊಲೀಸ್ ತನಿಖೆ ಯಲ್ಲಿ ಕಂಡು ಬಂದಿದೆ. ದೂರು ನೀಡಿದ ಶಿವಕುಮಾರ್ ಬಿಸರಳ್ಳಿ ಮಂಚದ ಮೇಲೆ ಮಲಗಲು ಮುಂದಾದಾಗ ವಿದ್ಯುತ್ ಶಾಕ್ ತಗಲಿದರೂ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆರೋಪಿ ವೀರೇಶ್. ನಿಂ. ಬಿಸರಳ್ಳಿ ಎಂಬಾತನನ್ನು ಬಂಧಿಸಿದ್ದಾರೆ.
ತನಿಖೆಯಲ್ಲಿ ಕಲಘಟಗಿ ಪಿ. ಎಸ್.ಐ. ಗಿರೀಶ್. ಎಂ., ಲೋಕೇಶ್ ಬೆಂಡಿಕಾಯಿ, ಸಿದ್ದು ಹೊಸಳ್ಳಿ, ಮಹಾಂತೇಶ್ ನಾಗನಗೌಡ, ಮಲ್ಲಿಕಾರ್ಜುನ ಸಜ್ಜನ, ಮಹಾದೇವ ನಡವಣಿ ಭಾಗವಹಿಸಿದ್ದರು.














