Image
Breaking News
• ವಿಶೇಷ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಿ:ಪರಶುರಾಮ್ ಸಾವಂತ. • ನೇತ್ರದಾನ ಮಹಾದಾನ ಬಂಗಣೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡ ವಿತರಣೆ       • ದೇಶಾಭಿಮಾನ ಬೆಳೆಸಿಕೊಳ್ಳೋಣ ನಾಗರಾಜ ಛಬ್ಬಿ.
21 Aug 2026 | 
ಇತಿಹಾಸ ಪ್ರಸಿದ್ಧ ತಂಬೂರ ಗ್ರಾಮಕ್ಕೆ ಒಲಿದ ಗಾಂಧಿ ಗ್ರಾಮ ಪುರಸ್ಕಾರ

ಇತಿಹಾಸ ಪ್ರಸಿದ್ಧ ತಂಬೂರ ಗ್ರಾಮಕ್ಕೆ ಒಲಿದ ಗಾಂಧಿ ಗ್ರಾಮ ಪುರಸ್ಕಾರ



Author : Vinayak M Bhat

ವಿಶೆಷ ವರದಿ 
ವಿನಾಯಕ ಭಟ್ ಹುಲ್ಲಂಬಿ
 ಭಾರತ ದೇಶವು ಹಳ್ಳಿಗಳಿಂದ ತುಂಬಿದ ದೇಶ. ಸ್ವಾತಂತ್ರ್ಯದ ನಂತರ ಮಹಾತ್ಮಾಗಾಂಧೀಜಿಯವರು ಹಳ್ಳಿಗಳ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿ ಎಂದು ನುಡಿದಿದ್ದರು. ಅದರಂತೆ ಈ ಬಾರಿಯೂ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರವು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಈ ತಂಬೂರ ಗ್ರಾಮಕ್ಕೆ ಲಭಿಸಿದೆ. 
 ಯಾವುದೇ ಸರ್ಕಾರವಿರಲಿ ಗ್ರಾಮಾಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಕೊಡುತ್ತಲೇ ಇರುತ್ತದೆ. ಅದರ ಸಮರ್ಪಕ ಬಳಕೆ ಸಂಪೂರ್ಣವಾಗಿ ಆಯಾ ಗ್ರಾಮ ಪಂಚಾಯತಿಗಳ ಜವಾಬ್ದಾರಿಯಾಗಿರುತ್ತದೆ. ಅದರಲ್ಲೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಶ್ರಮ ತುಂಬಾ ಇರುತ್ತದೆ. ಸಮಾಜವನ್ನು, ಸರ್ಕಾರವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಅದರಂತೆಯೇ ಈ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ನಾಗರಾಜಕುಮಾರ ಬಿದರಳ್ಳಿ ಇದೇ ತಾಲೂಕಿನ ಗಂಬ್ಯಾಪುರ ಗ್ರಾಮದಲ್ಲಿ ಹುಟ್ಟಿದ್ದು ಪೋಲಿಸ್ ಇಲಾಖೆ, ಕಾರಾಗೃಹಗಳ ಇಲಾಖೆ, ಕೆ.ಎಸ್.ಆರ್.ಟಿ.ಸಿ ಈ ಎಲ್ಲ ಇಲಾಖೆಗಳಿಗೆ ಸ್ವ ಇಚ್ಛೆಯಿಂದ ರಾಜಿನಾಮೆ ಕೊಟ್ಟು 2010 ರಿಂದ ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ ರಾಜ್ ಇಲಾಖೆಯಲ್ಲಿ ಪಿಡಿಓ ಆಗಿ ಇಂದಿನವರೆಗೆ ಸೇವೆ ಸಲ್ಲಿಸುತ್ತಾ ಇದಾರೆ. 
   ಈ ಪಂಚಾಯತಿಯು 5 ಗ್ರಾಮಗಳನ್ನು ಹೊಂದಿದ್ದು, 5640 ಜನಸಂಖ್ಯೆಯನ್ನು ಹೊಂದಿದೆ. ವಿಶೇಷವಾಗಿ ಮಹಾ ಶಿಲ್ಪಿ ಜಕಣಾಚಾರಿ ಕಾಲದ ಐತಿಹಾಸಿಕ ಶ್ರೀ ಬಸವಣ್ಣ ದೇವರ ದೇವಸ್ಥಾನ ಈ ತಾಲೂಕಿನ ಒಂದು ಕಿರೀಟವಾಗಿದೆ. ಅದರಲ್ಲೂ ಈ ಗ್ರಾಮಕ್ಕೆ 2022-23 ರ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ್ದು, ಎಲ್ಲ ಚುನಾಯಿತ ಸದಸ್ಯರಿಗೂ, ಸಿಬ್ಬಂದಿ ವರ್ಗದವರಿಗೂ , ಗ್ರಾಮಸ್ಥರಿಗೂ ಹರ್ಷ ತಂದಿದೆ. ವಸತಿ ಸೌಲಭ್ಯಗಳು, ಕಸ ವಿಲೇವಾರಿ ಘಟಕ, ವೈಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ, ಬದು, ಬಚ್ಚಲುಗುಂಡಿ(ಸೋಕ್ ಪಿಟ್), ಸಮುದಾಯ ಕಾಮಗಾರಿಗಳಾದ ಸಿ.ಸಿ ರಸ್ತೆ, ಪಕ್ಕಾ ಗಟಾರ, ಸ್ಮಶಾನ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಶಿಬಿರಗಳು, ಎಸ್.ಸಿ , ಎಸ್.ಟಿ ಮತ್ತು ಅಂಗವಿಕಲರ ಅನುದಾನ ಸದ್ಭಳಕೆ, ಅಂಗನವಾಡಿ ಕೇಂದ್ರಗಳ ಬಲವರ್ದನೆ, ನರೇಗಾ ಯೋಜನೆ, ಸ್ವಚ್ಛ ಭಾರತ್ ಮಿಷನ್, ತೆರಿಗೆ ವಸೂಲಾತಿಯಲ್ಲೂ ಶೇ.100ರ ಪ್ರಗತಿ ಸಾಧಿಸಿದ್ದು, ಈ ಪ್ರಶಸ್ತಿಯ ಪ್ರತೀಕಗಳಾಗಿವೆ. ಗಾಂಧೀಜಿ ಜಯಂತಿ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರು ಪಿಡಿಓ ಹಾಗೂ ಅಧ್ಯಕ್ಷೆ ಗೌಸಿಯಾಬಾನು ಮುಲ್ಲಾ ಪ್ರಶಸ್ತಿ ಸ್ವೀಕರಿಸಿದರು.  

 


ತಾ.ಪಂನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ ಸಾವಂತ್ – “ಈ ಪಂಚಾಯತಿಗೆ ಗಾಂಧಿಗ್ರಾಮ ಪುರಸ್ಕಾರ ದೊರೆತಿರುವುದು ಹೆಮ್ಮೆಯ ವಿಷಯ. ಜನರ ಸಹಭಾಗಿತ್ವದಿಂದ ಈ ಕಾರ್ಯ ಸಾಧಿಸಿದೆ.”
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾಗರಾಜ ಬಿದರಳ್ಳಿ – “ಸರ್ಕಾರಿ ಸೇವೆ, ಜನರ ಸೇವೆ ನನ್ನ ಕುಟುಂಬದ ಬಳುವಳಿ, ಎಲ್ಲರೂ ಸಹಕರಿಸಿದ್ದಾರೆ.”