Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಸ್ವಾಮೀಜಿ ಸರ್ವ ಸಮಾಜದ ಒಳಿತಿಗಾಗಿ ಬಂದಿದ್ದಾರೆ.  ಸಚಿವ ಸಂತೋಷ ಲಾಡ್

ಸ್ವಾಮೀಜಿ ಸರ್ವ ಸಮಾಜದ ಒಳಿತಿಗಾಗಿ ಬಂದಿದ್ದಾರೆ.  ಸಚಿವ ಸಂತೋಷ ಲಾಡ್



Author : Vinayak M Bhat

ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಸ್ವಾಮೀಜಿ ಶ್ರೀ ಪ್ರಸನ್ನ ನಂದಾಪುರಿಯವರು ಸರ್ವ ಸಮಾಜದ ಒಳಿತಿಗಾಗಿ ಬಂದಿದ್ದಾರೆ ಎಂದು ಕರ್ನಾಟಕ ಸರಕಾರದ ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಮಾನ್ಯ ಸಂತೋಷ ಲಾಡ್ ಹೇಳಿದರು.
ತಾಲೂಕಿನ ಬೆಲವಂತರ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿವನಾಪುರ ಗ್ರಾಮದಲ್ಲಿ ವಾಲ್ಮೀಕಿ ಭವನದ  ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಕಾರ್ಯಗಳು 3-4ತಿಂಗಳ ಮೊದಲೇ ಪ್ರಾರಂಭ ಆಗಬೇಕಿತ್ತು ವಿಳಂಬಕ್ಕೆ ಕ್ಷಮೆ ಇರಲಿ. ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳು ಪಕ್ಷ ಭೇದ, ಜಾತಿ ಭೇದ ಇಲ್ಲದೆ ಕರ್ನಾಟಕದ ಅರ್ಹ ಫಲಾನುಭವಿಗಳಿಗೆ ಮನೆ ಮನೆಗೆ ತಲುಪುತ್ತಿವೆ, ಕೊಡುವಾಗ ತಿಂಗಳುಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಿರಬಹುದು, ಆದರೆ ನಿಮಗೆ ಕೊಟ್ಟ ಭರವಸೆ ಸುಳ್ಳಾಗುವದಿಲ್ಲ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರ  ಘೋಷಿಸಿದಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ,ಮನೆಗೆ ಉಚಿತ ವಿದ್ಯುತ್, ಗೃಹ ಲಕ್ಷ್ಮಿ,ಅನ್ನ ಭಾಗ್ಯ, ಯುವ ನಿಧಿ  ಈ ಎಲ್ಲಾ ಯೋಜನೆ ಗಳಿಗೆ ಪ್ರತಿ ವರ್ಷ ಸುಮಾರು 60 ಕೋಟಿ ಹಣವನ್ನು ಕೊಡುತ್ತಿರುವದು ನಿಮ್ಮ ಗಮನಕ್ಕೆ ಇರಲಿ ಪಕ್ಷ ಭೇದ ಮರೆತು ಕಲಘಟಗಿ ಮತ ಕ್ಷೇತ್ರ ಅಭಿವೃದ್ಧಿ ಮಾಡೋಣ ಎಂದರು.

ಈ ಸಂಧರ್ಭದಲ್ಲಿ ಮಾನ್ಯ ಜಿಲ್ಲಾ ಅಧಿಕಾರಿ ದಿವ್ಯ ಪ್ರಭು,ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ ಜಿಲ್ಲಾ ಪೊಲೀಸ್ ವರಿಷ್ಟ ಅಧಿಕಾರಿ ಗುಂಜನ್ ಆರ್ಯ, ಎಸ್. ಆರ್. ಪಾಟೀಲ, ಕಲಘಟಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಂಜುನಾಥ್ ಮುರಳ್ಳಿ, ಆಪ್ತ ಕಾರ್ಯದರ್ಶಿಗಳಾದ ಹರಿಶಂಕರ ಮಠದ, ಸೋಮಶೇಖರ್ ಬೆನ್ನೂರ,ವಾಲ್ಮೀಕಿ ಸಂಘದ ಅಧ್ಯಕ್ಷ ಫಕ್ಕಿರಗೌಡ್ರುದೊಡಮನಿ,ಸಿ. ಪಿ. ಐ. ಶ್ರೀಶೈಲ ಕೌಜಲಗಿ, ತಹಶೀಲ್ದಾರ್ ಬಸವರಾಜ ಹೊಂಕಣ್ಣವರ, ತಾ ಪಂ. ಅಧಿಕಾರಿ ಪರಶುರಾಮ ಸಾವಂತ, ನರೇಗಾ ಸಹಾಯಕ ಅಧಿಕಾರಿ ಗಿರೀಶ ಕೋರಿ ಬೆಲವಂತರ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ರೇಣುಕಾ. ರಾ ಚಿತ್ರಾಪುರ ಅಧ್ಯಕ್ಷೆ ಗೀತಾ ಮಾ ಬಸನಕೊಪ್ಪ, ಸರ್ವ ಸದಸ್ಯರು ಲಿಂಗರೆಡ್ಡಿನಡುವಿನಮನಿ, ಕುಮಾರ ಖಂಡೇಕರ ಬಾಳು ಖಾನಾಪುರ,ಅಜಮತ್ ಜಹಗಿರ್ದಾರ,ಸಮಾಜದ ಮುಖಂಡರು,ಹನಮಂತ ಹರಿಜನ, ಗ್ರಾಮಸ್ಥರು ಉಪಸ್ಥಿ�