ನಿಮ್ಮ ಸೇವೆಯನ್ನು ನಮ್ಮ ಕ್ಷೇತ್ರ ಮರೆಯೋಲ್ಲ:ಸಂತೋಷ ಲಾಡ.
Author : Vinayak M Bhat
ನಿಮ್ಮ ಸೇವೆಯನ್ನು ನಮ್ಮ ಕ್ಷೇತ್ರ ಮರೆಯೋಲ್ಲ:ಸಂತೋಷ ಲಾಡ.
ನಿಮ್ಮ ಸೇವೆಯನ್ನು ನಮ್ಮ ಕಲಘಟಗಿ ಕ್ಷೇತ್ರ ಮರೆಯೊಲ್ಲ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಪಟ್ಟಣದ ಸರಕಾರಿ ಸಾರ್ವಜನಿಕಆಕಸ್ಮಿಕ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದರು. ಡಾ//ಬಸವರಾಜ ಬಾಸುರ ಅವರ ಸೇವೆ ಕುರಿತು ಪ್ರತಿಕ್ರಿಯಿಸಿ ತಾವು ರೋಗಿಗಳಿಗೆ ನೀಡುತ್ತಿರುವ ನಿರಂತರ ಸೇವೆಯು ಜನರಿಂದ ಹಾಗೂ ಸಿಬ್ಬಂದಿಯಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ, ನನ್ನ ಕ್ಷೇತ್ರದಲ್ಲಿ ನೀವು ಸಲ್ಲಿಸಿದ ಸೇವೆಗೆ ನಿಮಗೆ ನಾನು ಕ್ಷೇತ್ರದ ಪರವಾಗಿ ನೂರಾರು ನಮಸ್ಕಾರಗಳು ಎಂದರು.ಈ ಸಂಧರ್ಭದಲ್ಲಿಯ ಆಸ್ಪತ್ರೆಯ ವಿವಿಧ ಚಿಕಿತ್ಸಾ ಘಟಕಗಳನ್ನು ವಿಕ್ಷಿಸಿದರು, ನಂತರ ಚಿಕ್ಕ ಮಕ್ಕಳ, ಹೆರಿಗೆಯ, ತುರ್ತು ಚಿಕಿತ್ಸೆಯಇನ್ನಿತರ ಎಲ್ಲ ವಾರ್ಡಗಳಿಗೆ ತೆರಳಿ ರೋಗಿಗಳ ಯೋಗ ಕ್ಷೇಮ ವಿಚಾರಿಸಿ ಕೈಲಾದ ಸಹಾಯ ಮಾಡಿದರು.
ಈ ಸಂಧರ್ಭದಲ್ಲಿ ಡಿ.ಎಚ್. ಒ.ಸತೀಶ ಹೊನಕೇರಿ,ಉಪ ವಿಭಾಗಾಧಿಕಾರಿ ಜುಬೇದ ಹುಸೇನ್, ಸಚಿವರ ಆಪ್ತ ಸಹಾಯಕರಾದ
ಹರಿಶಂಕರ ಮಠದ, ಸೋಮಶೇಖರ ಬೆನ್ನೂರ,ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ತಾ. ಪಂ. ಇ. ಒ. ಪರಶುರಾಮ ಸಾವಂತ, ಸಿ. ಪಿ. ಐ.ಶ್ರೀಶೈಲ ಕೌಜಲಗಿ, ಪ. ಪಂ. ಮುಖ್ಯಾಧಿಕಾರಿ ಬಿ. ಚಂದ್ರಶೇಖರ,ಶಂಕರ ದಾಸನಕೊಪ್ಪ,ಕುಮಾರ ಶಿವಲಿಂಗ ಮೂ ಗಣ್ಣವರ ಖಂಡೇಕರ,ಬಾಳು ಖಾನಾಪುರ, ಹನಮಂತ ಕಾಳೆ, ಅಜಮತ್ ಜಹಗಿರದಾರ,ಮುಂತಾದ ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.














