ಮನೆಮನೆಗೂ ಯುಡಿಐಡಿ ಕಾರ್ಡ್ ತಲುಪಬೇಕು:ಡಾ// ಈಶ್ವರ. ಆರ್. ಹೊಸಮನಿ.
Author : Vinayak M Bhat
ಜನ ಮುಖಿ ಸಂಸ್ಥೆಯಿಂದ ಮಕ್ಕಳಿಗೆ ಯು.ಡಿ.ಐ.ಡಿ.ಕಾರ್ಡ್.
ಮನೆಮನೆಗೂ ಯು.ಡಿ.ಐ.ಡಿ.ಕಾರ್ಡ್ ತಲುಪಬೇಕು ಎಂದು ಕಿಮ್ಸ್ ನಿರ್ದೇಶಕರಾದ ಡಾ// ಈಶ್ವರ. ಆರ್. ಹೊಸಮನಿ ಹೇಳಿದರು. ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಧಾರವಾಡ, ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಹುಬ್ಬಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ಕಲಘಟಗಿ, ಜನ ಮುಖಿ ಸ್ವಯಂ ಸೇವಾ ಸಂಸ್ಥೆ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ವಿಶೇಷ ಚೇತನ ಮಕ್ಕಳಿಗೆ ಯು.ಡಿ.ಐ.ಡಿ ಕಾರ್ಡ್ ನೀಡುವ ಹಾಗೂ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ಕೆ ಮಾನ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಸಂತೋಷ್. ಎಸ್. ಲಾಡ್. ಅವರು ವಿಶೇಷ ಆಸಕ್ತಿ ವಹಿಸಿ ಈ ಸೌಲಭ್ಯಗಳು ಎಲ್ಲಾ ವಿಶೇಷ ಚೇತನ ಮಕ್ಕಳಿಗೆ ಸಮನ್ವಯ ಶಿಕ್ಷಣ, ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗಬೇಕು ಎಂದು ಮಾರ್ಗದರ್ಶನ, ಹಾಗೂ ಸಹಕಾರ ನೀಡಿದ್ದಾರೆ, ಅವರ ಆಶಯದಂತೆ ಈ ಶಿಬಿರವನ್ನು ಇಲ್ಲಿಂದಲೇ ಪ್ರಾರಂಭಿಸಲಾಗಿದೆ ನಿಮ್ಮೆಲ್ಲರ ಮೂಲಕ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ// ರಾಜಶೇಖರ ದಾಬೇರಿ ಈ ಶಿಬಿರಗಳಿಂದ ಇಂತಹ ಮಕ್ಕಳ ಪೋಷಕರಿಗೆ ವರದಾನ ಆಗಿದೆ ಎಂದರು. ಬಿ.ಇ.ಓ.ಗಾಯತ್ರಿ ದೇವಿ ಸಜ್ಜನ್ ಮಾತನಾಡಿ ಇವರು ಸಮಾಜಕ್ಕೆ ಹೊರೆ ಅಲ್ಲ, ಉತ್ತಮ ಸಹಕಾರ ಆತ್ಮವಿಶ್ವಾಸ ತುಂಬುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು. ಪ್ರಾಸ್ತಾವಿಕವಾಗಿ ಡಾ // ಸಂದೀಪ ಜಾನ ಕುಂಟೆ ಮಾತನಾಡಿದರು? 370 ಮಕ್ಕಳಿಗೆ ನೋಂದಣಿ ಹಾಗೂ ಚಿಕಿತ್ಸೆ ನೀಡಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಸಚಿವರ ಆಪ್ತ ಕಾರ್ಯದರ್ಶಿಗಳಾದ ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ಬಾಳು ಖಾನಾಪುರ, ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಮ್ಯಾಗೇರಿ, ಡಾ // ಪಾಂಡುರಂಗ ಪೂಜಾರಿ, ಡಾ// ಪೂಜಾ ಬ್ಯಾಕುಂಟೆ, ಡಾ // ಆನಂದ ವರ್ಮ, ಆಶಿಯಾ, ಶಿಕ್ಷಕಿಯರಾದ ಲಕ್ಷ್ಮೀ ಹಿರೇಮಠ, ರುಕ್ಸಾನಾ ನದಾಫ್, ಪ್ರಭಾವತಿ ಹಂಜಿ, ಶೋಭಾ ಕುರಬರ ಮುಂತಾದವರು ಉಪಸ್ಥಿತರಿದ್ದರು. ಕೆ ಬಿ ಗುಡಿಮನಿ ನಿರೂಪಿಸಿ, ಬಸವರಾಜ ಹೊಸಮನಿ ವಂದಿಸಿದರು.














