Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಗ್ರಾಮ ದೇವಿ ಜಾತ್ರೆ ಅದ್ದೂರಿಯಾಗಿ ನಡೆಯಬೇಕು : ಸಂತೋಷ. ಎಸ್. ಲಾಡ.

ಗ್ರಾಮ ದೇವಿ ಜಾತ್ರೆ ಅದ್ದೂರಿಯಾಗಿ ನಡೆಯಬೇಕು : ಸಂತೋಷ. ಎಸ್. ಲಾಡ.



Author : Vinayak M Bhat

ಕಲಘಟಗಿಯ ಗ್ರಾಮದೇವಿ ಜಾತ್ರೆಯು ಅದ್ದೂರಿಯಾಗಿ ನಡೆಯಬೇಕು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್. ಎಸ್. ಲಾಡ್.ಹೇಳಿದರು.
ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆಯಲ್ಲಿ ಎಲ್ಲ ಅಧಿಕಾರಿಗಳ ಹಾಗೂ ಜಾತ್ರಾ ಉತ್ಸವ ಕಮಿಟಿ, ಟ್ರಸ್ಟ್ ಕಮಿಟಿ  ಹಾಗೂ ಮುಖಂಡರ ಉಪಸ್ಥಿತಿಯಲ್ಲಿ ಮಾತನಾಡಿದರು.
ಪಟ್ಟಣದ ಪ್ರತಿ ಓಣಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪೂರ್ಣ ಬೀದಿ ದೀಪದ ವ್ಯವಸ್ಥೆ,ಶುದ್ಧ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯಗಳು, ವಾಹನ ಪಾರ್ಕಿಂಗ್ ವ್ಯವಸ್ಥೆ ಅಂಬುಲೆನ್ಸ್ ಗಳು,ದೇವಿ ದರ್ಶನಕ್ಕೆ ಬರುವ ಎಲ್ಲ ಭಕ್ತಾದಿಗಳಿಗೆ ಅನ್ನಪ್ರಸಾದವು ಸೇರಿದಂತೆ ಬ್ಯಾರಿಕೇಡ್ ಗಳ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರಿ, ಏನೇ ಕುಂದುಕೊರತೆಗಳಿದ್ದರೂ 
ತಕ್ಷಣವೇ ನನ್ನ ಗಮನಕ್ಕೆ ತರಬೇಕು ಉತ್ತರ ಕರ್ನಾಟಕ ಭಾಗದ ಜಾತ್ರೆಗಳಲ್ಲಿ ಈ ದೇವಿ ಜಾತ್ರೆಯು ಮಹತ್ವದ ಸ್ಥಾನ ಪಡೆದಿದೆ ಎಂದರು. ಈ ಸಂದರ್ಭದಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಿ (ಚೌತಮುನಿ) ಪ್ರತಿಷ್ಠಾಪನೆಯ ಸ್ಥಳದ ಹತ್ತಿರ  ಎಲ್ಲಾ ಜಾತ್ರಾ ತಯಾರಿಯ ಕಾಮಗಾರಿಗಳನ್ನು ವೀಕ್ಷಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚ ಗ್ಯಾರಂಟಿ ಅಧ್ಯಕ್ಷ ಎಸ್ ಆರ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಶಾಸಕರ ಆಪ್ತ ಸಹಾಯಕ ಹರೀಶಂಕರ ಮಠದ,  ಪ್ರೊಬೆಷನರಿ ತಹಶೀಲ್ದಾರ್ ವರ್ತಿಕಾ ವರ್ಮ, ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಸಾವಂತ, ಪ ಪಂ ಮುಖ್ಯಧಿಕಾರಿ ಬಿ. ಚಂದ್ರಶೇಖರ,ಸಿಪಿಐ ಶ್ರೀಶೈಲ ಕೌಜಲಗಿ, ಬಾಬಣ್ಣ ಅಂಚೆಟಗೇರಿ, ಜಾತ್ರಾ ಸಮಿತಿಯ ಅಧ್ಯಕ್ಷ ಸುಧೀರ ಬೋಳಾರ, ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಕಾಂತ ಖಟಾವಕರ, ಬಾಳು ಖಾನಾಪುರ, ರಾಕೇಶ ಅಳಗವಾಡಿ, ಶರಣಪ್ಪ ಉಣಕಲ್ಲ, ಸೇರಿದಂತೆ ಪಟ್ಟಣದ ಜಾತ್ರಾ ಸಮಿತಿಯ ಮತ್ತು ಎಲ್ಲಾ ಮುಖಂಡರು ಉಪಸ್ಥಿತರಿದ್ದರು.