ಕಲಘಟಗಿಯಲ್ಲಿ ಬಸವಜಯಂತಿ ಮೊದಲು( ಏ20) ಪುತ್ಥಳಿ ಸ್ಥಾಪನೆಆಗುವುದೇ?
Author : Vinayak M Bhat
ಪ್ರತಿಷ್ಠಾಪನೆಗೆ ಕಾಯುತ್ತ ಇರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿ.
ಆಧುನಿಕತೆಯ ಭರದಲ್ಲಿ ದೂರವಾಗುತ್ತಿರುವ ಸಾಮಾಜಿಕ ಚಿಂತನೆಗಳು.
ಕೆಲವೊಮ್ಮೆ ಕೆಲವೊಂದು ಸಂಧರ್ಭಗಳನ್ನು ವಿಚಾರಿಸಲು,ವಿಶ್ಲೇಷಸಲು ಆಗುವದಿಲ್ಲ.
ಸಾಮಾನ್ಯವಾಗಿ ಸಾಧು ಸತ್ಪುರುಷರನ್ನು ನೆನೆಯುತ್ತೇವೆ, ಪ್ರಾರ್ಥಿಸುತ್ತೇವೆ, ಅವರ ಮಾರ್ಗದರ್ಶನದಲ್ಲಿ ನಮ್ಮ ಬದುಕನ್ನು ನಡೆಸುತ್ತೇವೆ.ಇವರ ಜಯಂತಿ, ಪುಣ್ಯ ಸ್ಮರಣೆ ಗಳನ್ನು ಶ್ರದ್ಧೆಯಿಂದ ಆಚರಿಸುತ್ತೇವೆ, ಆರಾಧಿಸುತ್ತೇವೆ. ಆದಿ ಕವಿ ಸರ್ವಜ್ಞ, ಕನಕದಾಸರು,ಸಂತ ಶಿಶುನಾಳ ಶರೀಫರು,ಶ್ರೀಮದ್ ಸಿದ್ಧಾರೂಢರು, ನವಲಗುಂದ ನಾಗಲಿಂಗೇಶ್ವರರು, ರಾಜಕೀಯ ಇತಿಹಾಸದಲ್ಲಿ ಮಹಾತ್ಮಾ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ //ಬಿ. ಆರ್. ಅಂಬೇಡ್ಕರ್, ಇತಿಹಾಸದಲ್ಲಿ ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿಲಕ್ಷ್ಮೀಬಾಯಿ, ಒನಕೆ ಓಬವ್ವ ಅಷ್ಟೇ ಏಕೇ ಬ್ರಿಟಿಷರ ಅಕ್ರಮಣದಲ್ಲಿ ದೇಶಕ್ಕಾಗಿ ನೇಣುಗಂಬಕ್ಕೆ ಕೊರಳುಕೊಟ್ಟಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಹೀಗೇ ಸಾಲು ಕೊನೆಗೂಳ್ಳುವದಿಲ್ಲ.
ಈ ಹಿಂದೆ ನಮ್ಮ ಕ್ಷೇತ್ರದ ಶಾಸಕರಾದ ಮಾನ್ಯ ದಿವಂಗತ ಸಿ. ಎಂ ನಿಂಬಣ್ಣವರ ಅಧಿಕಾರದಲ್ಲಿ ಇದ್ದಾಗ ಈ ಮೂರ್ತಿ ಪ್ರತಿಷ್ಠಾಪನೆಗೆ ಆಸಕ್ತಿ ಹೊಂದಿ ಮುರ್ತಿಯೂ ತಯಾರಾಗಿ ಕಳೆದ 2025ರ ಜೂನ್ ತಿಂಗಳಿನಲ್ಲಿ ಶ್ರೀ ಶ. ಬ್ರ. ರೇವಣಸಿದ್ಧ ಶಿವಾಚಾರ್ಯಮಹಾ ಸ್ವಾಮಿಗಳು 12ಮಠ ಕಲಘಟಗಿ ಇವರ ಸಾನಿಧ್ಯದೊಂದಿಗೆ ತಾಲೂಕಿನ ಮುಖಂಡರಾದ ಶಶಿಧರ ನಿಂಬಣ್ಣವರ,ಐ. ಸಿ. ಗೋಕುಲ, ನಿಂಗಪ್ಪ ಸುತಗಟ್ಟಿ, ಡಾ//ಎಫ್. ಕೆ. ನಿಗದಿ, ಯಲ್ಲಾರಿ ಶಿಂಧೆ, ಮಹಾಂತೇಶ ಹೆಂಬ್ಲಿ, ಸದಾನಂದ ಚಿಂತಾಮಣಿ,ಸುರೇಶ ಶೀಲವಂತರ, ಶಿವಪುತ್ರಯ್ಯ ತೇಗೂರಮಠ ಮುಂತಾದವರ ಸ್ವ ಆಸಕ್ತಿಯಿಂದ ಪಟ್ಟಣಕ್ಕೆ ಮೆರವಣಿಗೆ ಮೂಲಕ ಆಗಮಿಸಿ ಸಧ್ಯಕ್ಕೆ ದಿವಂಗತ ಶಾಸಕರ ಮನೆಯಂಗಳದಲ್ಲಿ ಸ್ಥಾಪನೆಗೆ ಕಾಯುತ್ತಿದೆ. ಇದು ಅಚಾರವೆ? ಅನಾಚಾರವೆ?(ಸ್ವರ್ಗವೇ) ಸಾರ್ವಜನಿಕವಿಚಾರವೇದಿಕೆಗೆ ಬಿಟ್ಟದ್ದು. ಭಾಷಣಗಳಲ್ಲಿ ನಮ್ಮನ್ನು ಆಳುವ ರಾಜರೋ? ದೊರೆಗಳೋ? ಮಂತ್ರಿಗಳೋ?ಭಾಷಣಗಳಲ್ಲಿ ಇವರನ್ನು ಸ್ಮರಿಸಿದ್ದೇ ಸ್ಮರಿಸಿದ್ದು.ಪಕ್ಷಭೇಧ, ಜಾತಿಭೇಧ ಇಲ್ಲದ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆಯನ್ನು ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸದ ಅಕ್ಷಯ ತೃತಿಯ (ಏಪ್ರಿಲ್ 20 )ದಿನದಂದು ಆಚರಿಸುತ್ತೇವೆ. ಇನ್ನೂ ಕನಿಷ್ಠ 2 ತಿಂಗಳು ಸಮಯ ಇದೆ.ಮಾನ್ಯ ಕಾರ್ಮಿಕ ಸಚಿವ ಸಂತೋಷಲಾಡ್, ತಾಲೂಕಿನ ಮುಖಂಡರಾದ ಮಾಜಿ ಎಂ. ಎಲ್. ಸಿ. ನಾಗರಾಜ ಛಬ್ಬಿ,ಹಾಗೂ ತಾಲೂಕಿನ ಸಮಸ್ತ ಭಾಂಧವರು ಒಗ್ಗೂಡಿ ಪಟ್ಟಣದಲ್ಲಿ ಮೂರ್ತಿ ಅನಾವರಣ ಮಾಡಲಿ, ಅವರ ತತ್ವ ಆದರ್ಶಗಳು ನಮ್ಮ ಸಮಾಜಕ್ಕೆ ದಾರಿ ದೀಪ ಆಗಲಿ ಎಂದು ಪತ್ರಿಕೆಯು ಹಾರೈಸುತ್ತದೆ.ಕಾಯಕವೇ? ಕೈಲಾಸ?
ವಿನಾಯಕ ಭಟ್ಟ ಬಿ ನ್ಯೂಸ್ ಹಬ್ ಹುಲ್ಲಂಬಿ.














