ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ :ಚಿದಂಬರ ಜೋಶಿ.
Author : Vinayak M Bhat
ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ ಎಂದು ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕ ಚಿದಂಬರ ಜೋಶಿ ಹೇಳಿದರು.

ಪಟ್ಟಣದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ರಜತ ಮಹೋತ್ಸವದ ಅಂಗವಾಗಿ ಮಹಿಳೆಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಇದೇ ಏಪ್ರಿಲ್ 2 ರಂದು ಹೋಮ ಹವನ, ಹಾಗೂ ದಿ 3 ರಂದು ಮಹಾಲಕ್ಷ್ಮಿ ದೇವಿಯ ರಥೋತ್ಸವ ಹಾಗೂ ಶ್ರೀಗಳ ಭವ್ಯ ಶೋಭಾಯಾತ್ರೆ ಜರುಗುತ್ತದೆ. ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು , ಹಾಗೂ ಕಲಘಟಗಿ ಹನ್ನೆರಡು ಎತ್ತಿನ ಮಠದ ಷ. ಬ್ರ. ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಲಿದ್ದಾರೆ.ಕಲಘಟಗಿ ಪಟ್ಟಣದಲ್ಲಿ ಪ್ರಪ್ರಥಮವಾಗಿ ಶ್ರೀ ಮಹಾಲಕ್ಷ್ಮಿ ದೇವಿಯ ರಥೋತ್ಸವ ನಡೆಯಲಿದ್ದು ನಿಮ್ಮ ನಿಮ್ಮ ಭಾಗಗಳಲ್ಲಿ ತಳಿಲು ತೋರಣ, ರಂಗೋಲಿಗಳಿಂದ ಶೃಂಗರಿಸಿರಿ. ರಥೋತ್ಸವದಲ್ಲಿ ವಾದ್ಯ ಮೇಳಗಳು ಇರಲಿವೆ
ಈ ಕುರಿತು ಇನ್ನೂ ಸಭೆಗಳನ್ನು ಕರೆಯುತ್ತೇವೆ ಎಂದರು. ಪಾಂಡುರಂಗ ಜೋಶಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ವಿಶ್ವಸ್ಥ ಮಂಡಳಿಯ ಮುಖ್ಯಸ್ಥರಾದ ಕಿರಣ ಕಡ್ಲಾಸ್ಕರ, ರವಿ ದೈವಜ್ಞ, ರಘುವೀರ ಮುತಾಲಿಕ್ ದೇಸಾಯಿ, ಸತ್ಯಮೂರ್ತಿ ಜೋಶಿ,ಪಾರ್ಥ ಜೋಶಿ, ಅಪರ್ಣ ಶೆವಡೆ, ಅರುಂಧತಿ ಕುಲಕರ್ಣಿ, ಮಾಧುರಿ ಮುತಾಲಿಕ್ ದೇಸಾಯಿ,ದೀಪಾ ಪಂಡಿತ, ಅಶ್ವಿನಿ ಹೊಸಳ್ಳಿ, ಪದ್ಮಾವತಿ ಜೋಶಿ, ಪೂಜಾ ಪಂಡಿತ, ದೀಪಾ ಕೇಸರೇಕರ, ರಂಜಿತಾ ಜ್ಯೋತಿ ರೇವಣಕರ, ಸವಿತಾ ಉಪ್ಪಿನ, ಜ್ಯೋತಿ ರೇಖಾ ಶೆಟ್ಟಿ, ಚಿಂತಿತಾ ಜೋಶಿ, ಶಶಿಕಲಾ ಬುಡ್ಡಣ್ಣವರ ಮುಂತಾದವರು ಪಾಲ್ಗೊಂಡಿದ್ದರು.














