Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ವಿ ಬಿ ರಾಮ್ ಜಿ ಬಂದಿಲ್ಲ ನರೇಗಾ ಹೋಗಿಲ್ಲ.

ವಿ ಬಿ ರಾಮ್ ಜಿ ಬಂದಿಲ್ಲ ನರೇಗಾ ಹೋಗಿಲ್ಲ.



Author : Vinayak M Bhat

ಸರಕಾರಗಳ ಹೊಸ ಯೋಜನೆಗಳು ಆಯಾ ಪಕ್ಷದ ಸಿದ್ಧಾಂತಗಳಿಗನುಗುಣವಾಗಿ ಚುನಾವಣೆಗಳಲ್ಲಿ ,ಅಧಿಕಾರ ನಡೆಸುವಲ್ಲಿ,ಜನರ,ದೇಶದ ಅಭಿವೃದ್ಧಿಗೋ? ದೇಶದ  ನಿರುದ್ಯೋಗ ನಿವಾರಣೆಗೋ?ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಷ್ಠಾನಗೊಳಿಸುತ್ತ ಇರುತ್ತವೆ, ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರ ಸರಕಾರದ ದಿವಂಗತ ಪ್ರಧಾನಿ ಆರ್ಥಿಕ ತಜ್ಞ ಮನಮೋಹನ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರದ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ದೇಶಾದ್ಯಂತ ಸಾವಿರಾರು ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಅನುಷ್ಠಾನಗೊಳಿಸಿತು.  ಮೊದಲೇ ನಮ್ಮ ದೇಶ ಹಳ್ಳಿಗಳ ದೇಶ ಎಂದು ವಿಚಲಿತವಾಗಿದೆ. ಗ್ರಾಮೀಣ ಅಭಿವೃದ್ಧಿ ಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಈ ಯೋಜನೆಯಿಂದ ಗ್ರಾಮಗಳಲ್ಲಿನ ಕೆಸರು ರಸ್ತೆಗಳು ನೆನಪಿನ ಅಂಗಳದಿಂದ ಮಾಯವಾಗಿ ಸಿ. ಸಿ. ರಸ್ತೆಗಳಾಗಿ ಮಾರ್ಪಟ್ಟಿವೆ, ಅವಶ್ಯಕತೆ ಇರುವಲ್ಲಿ ಸಿ. ಡಿ.ನಿರ್ಮಾಣ,  ರೈತರ ಭೂಮಿ ಸವಕಳಿ ತಡೆಯಲು ನೀರು ಕಾಲುವೆ, ಕೆರೆ ಹೂಳು ತೆಗೆಯುವದು, ರೈತರಿಗಾಗಿಯೇ ಪಶು, ಕುರಿ, ಮೇಕೆ ಶೆಡ್ ನಿರ್ಮಾಣಗಳು, ಕೃಷಿ ಅರಣ್ಯ ಹೀಗೆ ಹತ್ತು ಹಲವಾರು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದು, ಅಷ್ಟೇ ಅಲ್ಲದೇ ಕೂಲಿಗಾಗಿ ವಲಸೆ ಹೋಗಬಾರದು ಎಂಬ ನಿಯಮ ಇಟ್ಟು ಪ್ರತಿ ವರ್ಷಕ್ಕೆ ನಿಯಮನುಸಾರ 100 ದಿನಗಳ ಉದ್ಯೋಗ ಖಾತರಿ ನೀಡಿ ಉದ್ಯೋಗ ನೀಡಿದ್ದು ಇಂದು ಇತಿಹಾಸ ಪುಟ ಸೇರುತ್ತಿದೆ.

ಬದಲಾವಣೆ ಜಗದ ನಿಯಮ?ಆದರೆ ಎನ್. ಡಿ. ಎ. ನೇತೃತ್ವದ ಮೋದಿಜಿಯವರ ಬಿ.ಜೆ.ಪಿ. ಸರಕಾರವು 2026-27ನೇ ಸಾಲಿನಿಂದ ಯೋಜನೆಗೆ ವಿ ಬಿ ಜಿ ರಾಮ್ ಜಿ ಎಂದು ಹೊಸ ನಾಮಕರಣ ಮಾಡಿದ್ದಾರೆ. ಆದರೆ ಕಳೆದ 25-26ನೇ ಆರ್ಥಿಕ ವರ್ಷದ ಯೋಜನಾ ವರದಿಯಲ್ಲಿ ಅನೇಕ ಕಾಮಗಾರಿಗಳು ಅನುಷ್ಠಾನಗೊಳ್ಳದೆ ಕಾಗದಗಳಲ್ಲಿ ಕೊಳೆಯುತ್ತಿವೆ. ಅಧಿಕಾರಿಗಳನ್ನು ಸಂಪರ್ಕಿಸಿದರೆ ಹೊಸ ಮಾರ್ಗದರ್ಶಿ ಬಂದಿಲ್ಲ, ಸೈಟ್ ಬಂದ್ ಇದೆ, ಆನ್ ಗೋಯಿಂಗ್ ಆಗುವದಿಲ್ಲ,7 ತಿಂಗ್ಳ್ ಆತ್ರಿ ಪೇಮೆಂಟ್ ಆಗಿಲ್ಲ,ಇವು ಸರ್ವೆ ಸಾಮಾನ್ಯ ಆಗಿವೆ.

“ಇದ್ದ ಪರಿಸ್ಥಿತಿಯಲ್ಲಿ ಕೂಲಿಕಾರರಿಗೆ ತೊಂದರೆಯಾಗದಂತೆ ಕೂಲಿ ನೀಡುತ್ತಿದ್ದೇವೆ ಎನ್ನುತ್ತಾರೆ – ತಾ. ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ್ ಸಾವಂತ್”

ಒಟ್ಟಾರೆ ಒಂದು ಗಾದೆ ಮಾತಿದೆ ಗಂಡ ಹೆಂಡತಿ ನಡುವೆ ಕೂಸು ಬಡವಾಯಿತುಎಂದು. ಕೇಂದ್ರ ಅನುಷ್ಠಾನ ಮಾಡುತ್ತಿದೆ, ರಾಜ್ಯ ವಿರೋಧಿಸುತ್ತಿದೆ.ಹೊಸ ಹೆಸರೋ? ಹಳೇ ಹೆಸರೋ? ಆದಷ್ಟು ಬೇಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಂದುಗೂಡಿ ಯೋಜನೆಯನ್ನು ಅನುಷ್ಠಾನಗೊಳಿಸಿ ಗ್ರಾಮೀಣ ಹಾಗೂ ದೇಶದ ಅಭಿವೃದ್ಧಿ ಮಾಡಲಿ ಎಂದು ಪತ್ರಿಕೆ ಹಾರೈಸುತ್ತದೆ.