ಕರಾಟೆ ಮಹಿಳಾ ತಂಡಕ್ಕೆ ವಿಜಯಲಕ್ಷ್ಮಿ ಆಯ್ಕೆ
Author : Vinayak M Bhat
ಕಲಘಟಗಿ: ತಾಲೂಕಿನ ದಾಸ್ತಿಕೋಪ್ಪ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕು.ವಿಜಯಲಕ್ಷ್ಮಿ ಸಹದೇವ ಹರಮಣ್ಣವರ, 2025-26 ನೇ ಸಾಲಿಗೆ ಕರ್ನಾಟಕ ವಿಶ್ವವಿದ್ಯಾಲಯದ ಮಹಿಳಾ ಕರಾಟೆ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಈ ಕುರಿತು ಕರ್ನಾಟಕ ವಿಶ್ವವಿದ್ಯಾಲಯ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ಇಲಾಖೆ , ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಆಯ್ಕೆಯಾಗಿದ್ದು. ಸರ್ಕಾರಿ ಪ್ರಥಮ ದರ್ಜೆ ಕಲಘಟಗಿ ಕಾಲೇಜಿನ ವಿದ್ಯಾರ್ಥಿನಿ , ಕರ್ನಾಟಕ ವಿಶ್ವವಿದ್ಯಾಲಯದ ಕರಾಟೆ (ಮಹಿಳಾ) ತಂಡವನ್ನು ನೈಋತ್ಯ ವಲಯ, ದಕ್ಷಿಣ ವಲಯ, ಅಖಿಲ ಭಾರತ, ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯು ಮಧ್ಯಪ್ರದೇಶದ ಭೂಪಾಲ ಸಗೇ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 17 ರಂದು ಜರುಗುವ ಕರಾಟೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರತಿನಿಧಿಸುತ್ತಾರೆ. ಆಯ್ಕೆಯಾದ ವಿದ್ಯಾರ್ಥಿನಿಗೆ ಕಲಘಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಪೋಷಕರು ಶುಭ ಹಾರೈಸಿದ್ದಾರೆ.














