Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಗ್ಯಾಸ್ ಟ್ಯಾಂಕರ್ ಅಪಘಾತ : ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕದಳ ನಿರಂತರ ಶ್ರಮ.

ಗ್ಯಾಸ್ ಟ್ಯಾಂಕರ್ ಅಪಘಾತ : ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕದಳ ನಿರಂತರ ಶ್ರಮ.



Author : Vinayak M Bhat

ರಾಷ್ಟ್ರೀಯ ಹೆದ್ದಾರಿ 63ರ ಕಲಘಟಗಿ ತಾಲೂಕಿನ ತಂಬೂರ ಕ್ರಾಸ್ ಬಳಿ ಗ್ಯಾಸ್ ಟ್ಯಾಂಕರ್ ಅಪಘಾತಕ್ಕೀಡಾಗಿದ್ದು ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ನಿರಂತರ ಕಠಿಣ ಶ್ರಮದಿಂದ ಯಾವುದೇ ಪ್ರಾಣಾಪಾಯ  ಇಲ್ಲದೆ ಆಗುವ ದೊಡ್ಡ ಅನಾಹುತವನ್ನು ತಪ್ಪಿಸಿ ಸಂಚಾರ ಸುಗಮಗೊಳಿಸಿದ್ದಾರೆ. ಪ್ರಯಾಣಿಕರ ಹಾಗೂ ಸರಕು ಸಾಗಾಣಿಕೆ ವಾಹನಗಳಿಗೆ ಆಯಾ ಪ್ರಯಾಣಗಳಿಗೆ ಅನುಗುಣವಾಗಿ ವ್ಹಾಯಾ ತಡಸ, ಮುಂಡಗೋಡ, ಹಳಿಯಾಳ, ಮಾರ್ಗಗಳನ್ನು ಅನುಕರಿಸಿ ಸಂಚಾರಕ್ಕೆ ತೊಂದರೆ ಆಗದಂತೆ ರಾತ್ರಿಯಿಡಿ ಪ್ರಯತ್ನ ಪಟ್ಟರು. ಮಾನ್ಯ ಜಿಲ್ಲಾ ಅಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಕಲಘಟಗಿ ತಹಸೀಲ್ದಾರ್ ಬಸವರಾಜ ಹೊಂಕಣದವರ ಮತ್ತು ಸಿಬ್ಬಂದಿ ವರ್ಗ ವಿಶೇಷ ಆಸಕ್ತಿ ವಹಿಸಿ ಮಂಗಳೂರಿನಿಂದ 4ಜನ ಸಿಬ್ಬಂದಿಯೊಂದಿಗೆ ಎಮರ್ಜೆನ್ಸಿ ರೆಸ್ಟೋ ವೆಹಿಕಲ್ಲನ್ನು ತರಿಸಿ ಗ್ಯಾಸನ್ನು ಇನ್ನೊಂದು ಟ್ಯಾಂಕರಗೆ ತುಂಬುವಲ್ಲಿ ಯಶಸ್ವಿ ಆದರು.ಘಟನೆಗೆ ಮುನ್ನೆಚ್ಚರಿಕೆವಹಿಸಿ ಆಗುವ ದೊಡ್ಡ ಅನಾಹುತವನ್ನು ತಪ್ಪಿಸಿದ ಕಲಘಟಗಿ ಪೊಲೀಸ್ ಠಾಣೆಯ ಸಿಪಿಐ ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿ, ಮತ್ತು ಅಗ್ನಿಶಾಮಕ ದಳದ ಎಲ್ಲ ಸಿಬ್ಬಂದಿಯವರಿಗೆ ಸಾರ್ವಜನಿಕರು ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ (ಐಪಿಎಸ್ ) ಹಾಗೂ ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಬಸವರಾಜ ಕರಿ ಲಿಂಗಣ್ಣನವರ ತಮ್ಮ ಸಿಬ್ಬಂದಿಗಳೊಡನೆ ಕಾರ್ಯಾಚರಣೆ ಯಶಸ್ವಿಗೊಳಿಸಿ ಸಂಜೆ 4ರ ಸುಮಾರಿಗೆ ಹೆದ್ದಾರಿಯನ್ನು ಸಂಚಾರಕ್ಕೆ ಸುಗಮಗೊಳಿಸಿದರು