ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
Author : Vinayak M Bhat
ಕಳೆದ 17ರಂದು ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದ ಎಲ್ಲ ಮನೆಗಳಿಗೂ ಭಾರಿ ಆಣೆಕಲ್ಲು ಸುರಿದ ಪರಿಣಾಮ ಸಾವಿರಾರು ಮನೆ ಹಂಚುಗಳು ಒಡೆದು ಚೂರಾಗಿದ್ದವು,ಬೆಳೆಗಳು ನೆಲಕಚ್ಚಿದ್ದವು, ಕೂಡಲೇ ಸಚಿವರ ಆದೇಶಕ್ಕೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಹಾಗೂ ತಾಲೂಕ ಅಧಿಕಾರಿಗಳು ಭೇಟಿ ನೀಡಿದ್ದರು.ಸಚಿವರ ಆಪ್ತ ವಲಯವು ಹಗಲಿರುಳೆನ್ನದೆ ಕಾರಖಾನೆಗಳನ್ನು ಸಂಪರ್ಕಿಸಿ ಹಂಚುಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ.ಈ ಗ್ರಾಮದ ಪ್ರತಿ ಮನೆಗೂ ಇಂದು ಬೆಳಗಿನ ಜಾವ 8ಘಂಟೆ ಯಿಂದಲೂ 210ಮನೆಗಳಿಗೆ ಪ್ರತಿ ಮನೆಗೂ 200ರಂತೆ 50ಸಾವಿರಕ್ಕೂ ಹೆಚ್ಚು ಹಂಚುಗಳನ್ನು ಮನೆ ಮನೆಗಳಿಗೂ ಹಂಚಿದರು.

ಈ ಸಂಧರ್ಭದಲ್ಲಿ ಪಂಚ ಗ್ಯಾರಂಟಿ ಜಿಲ್ಲಾ ಅಧ್ಯಕ್ಷ ಎಸ್. ಆರ್.ಪಾಟೀಲ,ಕಲಘಟಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ,ಸಚಿವರ ಆಪ್ತಕಾರ್ಯದರ್ಶಿಗಳಾದ ಹರಿಶಂಕರ ಮಠದ,ಸೋಮಶೇಖರ ಬೆನ್ನೂರ, ಕೃಷಿಕ ಸಮಾಜದ ಅಧ್ಯಕ್ಷ ಬಾಬಣ್ಣ ಅಂಚಟಗೇರಿಸುಧೀರ ಬೋಳಾರ, ಬಾಳು ಖಾನಾಪುರ,ಗ್ರಾಮದಗಿರೀಶ ಸಂ ಸೂರ್ಯವಂಶಿ, ಪ್ರವೀಣ ಸೂರ್ಯವಂಶಿ, ಗುರುಸಿದ್ದಯ್ಯ ಬುಕುಟಗಾರ, ಚರಣಪಾಟೀಲ, ಬಸಪ್ಪ ಹೊನ್ನಳ್ಳಿ, ಕಲ್ಲಯ್ಯ ಬ. ಹೆಬ್ಬಳ್ಳಿಮಠ ಸಹದೇವ ಹುರಕಡ್ಲಿ, ಬೂದಪ್ಪ ಹುರಕಡ್ಲಿ, ಶಿವಯ್ಯ. ಬು.ಹೆಬ್ಬಳ್ಳಿಮಠ, ಕಲ್ಲಯ್ಯ. ಮ. ಹೆಬ್ಬಳ್ಳಿಮಠ, ಬಸಪ್ಪ. ಸಿ. ಬ್ಯಾಹಟ್ಟಿ, ಅರ್ಜುನ. ರಾ. ಹುಲಿಹೊಂಡ, ಶ್ರೀನಾಥ. ರಾ. ಯುವರಾಜ,ಹಾಗೂ ಗ್ರಾಮದ ರೈತರುಉಪಸ್ಥಿತರಿದ್ದು ಮಹಿಳೆಯರು, ಗ್ರಾಮಸ್ಥರು ಸಂತೋಷ ಲಾಡ್ ಅವರಿಗೆ ಒಳ್ಳೆಯದಾಗಲಿ ಎಂದು ಹರಸಿದರು.














