Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
05 Apr 2026 | 
ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ.

ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ.



Author : Vinayak M Bhat


ಕಂದಾಯ,ಕೃಷಿ,ತೋಟಗಾರಿಕೆ, ಜಂಟಿಯಾಗಿ ಶೀಘ್ರ ಸಮೀಕ್ಷೆ ಮಾಡಿ: ಸಂತೋಷ ಲಾಡ.
ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ  ಸಮೀಕ್ಷೆ ಮಾಡಿ ಅತೀ ತೀವ್ರವಾಗಿ ಸರಕಾರಕ್ಕೆ ವರದಿ ಸಲ್ಲಿಸಿರಿ ಎಂದು ಕರ್ನಾಟಕ ಸರಕಾರ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ.ಎಸ್.ಲಾಡ.ಹೇಳಿದರು.
ತಾಲೂಕಿನ ಮಾಚಾಪುರ ಗ್ರಾಮಕ್ಕೆ ಅಣೆ ಕಲ್ಲಿನಿಂದ ಹಾನಿಗೊಳಗಾದ ಮನೆಗಳಿಗೆ ಹಾಗೂ ಜಮೀನುಗಳಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾತನಾಡಿದರು. ಸಂಕಷ್ಟ ಸಮಯದಲ್ಲಿ ನಮ್ಮ ಕಾಂಗ್ರೇಸ್ ಪಕ್ಷ ಹಾಗೂ ಜಿಲ್ಲಾ ಆಡಳಿತ ನಿಮ್ಮೊಂದಿಗೆ ಸದಾಕಾಲ ಇರುತ್ತದೆ ಎಂದರು. ಈ ಅನೀರಿಕ್ಷಿತ ಹಾನಿಯಿಂದ ಜಾನುವಾರು ಪ್ರಾಣ ಕಳೆದುಕೊಂಡ ಮಾಲೀಕರಾದ ಕಲ್ಲಪ್ಪ.ಬ. ಹುರಕಡ್ಲಿ,ನಿಂಗಪ್ಪ. ತಿ. ರಾಮನಕೊಪ್ಪ, ನಾಗಪ್ಪ.ಫ.ಇಂದೂರ, ಇವರಿಗೆ ತಲಾ 20.000ರೂಗಳ ಚೆಕ್ಕ್ ಗಳನ್ನು ಜಿಲ್ಲಾಡಳಿತ ವತಿಯಿಂದ ಸ್ಥಳದಲ್ಲೇ ವಿತರಿಸಿದರು.


ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಜಿ. ಪಂ. ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಎಸ್. ಪಿ.ಗುಂಜನ್ ಆರ್ಯ, ಉಪವಿಭಾಗಾಧಿಕಾರಿ ಶಾಲಂ ಹುಸೇನ,ತಾ.ಪಂ.ಇ.ಒ.ಪರಶುರಾಮ ವೈ. ಸಾವಂತ, ಪ.ಪಂ. ಮುಖ್ಯಧಿಕಾರಿ ಸಿ ಚಂದ್ರಶೇಖರ, ಸಿಪಿಐ ಶ್ರೀಶೈಲ ಕೌಜಲಗಿ, ತಹಸೀಲ್ದಾರ ಬಸವರಾಜ ಹೊಂಕಣದವರ,ಸಹಾಯಕ ಕೃಷಿ ನಿರ್ದೇಶಕ ಅಮರ ನಾಯ್ಕರ,ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶ್ರೀದೇವಿ ಎಸ್. ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಸತಾಳಿ,ಸಚಿವರಆಪ್ತ ಕಾರ್ಯದರ್ಶಿ ಗಳಾದ ಹರಿಶಂಕರ ಮಠದ, ಸೋಮಶೇಖರ್ ಬೆನ್ನೂರು, ಕಲಘಟಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ,ಬಾಬಣ್ಣ ಅಂಚಟಗೇರಿ,ಬಾಳು ಖಾನಾಪುರ, ರಫೀಕ್ ಸುಂಕದ, ಯಲ್ಲಪ್ಪ ಚೌವರಗಿ,ನೊಂದ ರೈತ ಪರಿವಾರ ಉಪಸ್ಥಿತರಿದ್ದರು.

Tags