Image
Breaking News
• ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ • ಜಿಲ್ಲಾಡಳಿತದೊಂದಿಗೆ ಮಾಚಾಪುರಕ್ಕೆ ಸಚಿವ ಸಂತೋಷ ಲಾಡ ಭೇಟಿ. • ಸೋರುವ ಸೂರಿಗೆ ಆಸರೆ ಆದ ಸಂತೋಷ ಲಾಡ ಫೌಂಡೇಶನ್.:ಮಾಚಾಪುರ ಗ್ರಾಮಕ್ಕೆ ಉಚಿತವಾಗಿ 50ಸಾವಿರ ಹಂಚುಗಳ ವಿತರಣೆ.
06 Apr 2026 | 
ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ

ದಿವಂಗತ ಗೋವಿಂದ ಶಿವು ಮರಾಠಿ ಸ್ಮರಣಾರ್ಥ ಯಕ್ಷಗಾನ ರಾಜ ರುದ್ರಸೇನ



Author : Vinayak M Bhat

ಯಕ್ಷಗಾನ ಕಲೆ ಉಳಿಸಿ ಬೆಳೆಸಿ: ಉದಯ ಭಟ್ಟ.

 ಕರಾವಳಿಯ ಜನರ ನಾಡಿಯಾದ ಹೆಮ್ಮೆಯ ಅನಾದಿಕಾಲದಿಂದ ಬಂದ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ  ಉದಯ ಭಟ್ಟ ಹೇಳಿದರು. 

ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ  ಗ್ರಾಪಂ ವ್ಯಾಪ್ತಿಯ ಬಂಗಣಿ ಗ್ರಾಮದಲ್ಲಿ ಇತ್ತೀಚೆಗೆ ನಿಧನರಾದ ಮಂಡಳಿಯ ಅಧ್ಯಕ್ಷ ದಿ. ಗೋವಿಂದ ಮರಾಠಿ ಇವರ ಸ್ಮರಣಾರ್ಥ ಏರ್ಪಡಿಸಿದ್ದ ಉಗ್ರ ನರಸಿಂಹ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವತಿಯಿಂದ ರಾಜ ರುದ್ರಸೇನಾ ಎಂಬ ಆಟದಲ್ಲಿ ಮಾತನಾಡಿದರು. ಶ್ರೀಯುತರು ಅನೇಕ ವರ್ಷಗಳಿಂದ ಯಕ್ಷಗಾನ ಮಂಡಳಿ ಯ ಅಧ್ಯಕ್ಷರಾಗಿ,ಹಿಮ್ಮೇಳ ವಾದ್ಯ ವೃಂದದಲ್ಲಿ ಸೇವೆ ಸಲ್ಲಿಸಿದ್ದಾರೆ, ಇವರ ನಿಧನದಿಂದ ಈ ರಂಗವು ಒಬ್ಬ ಒಳ್ಳೆಯ ಪ್ರತಿಭೆಯನ್ನು ಕಳೆದುಕೊಂಡಿದೆ,ಬದಲಾದ ಜೀವನ ಶೈಲಿಯಲ್ಲಿ ಇಂತಹ ಅಮೂಲ್ಯ ಕಲೆಯನ್ನು ಉಳಿಸುವುದರೊಂದಿಗೆ ನಮ್ಮ ಕನ್ನಡ ಭಾಷೆ ನಡೆ-ನುಡಿ ಉಳಿಸಬೇಕು,ಇದರಿಂದ ಮುಂದಿನ ಯುವ ಜನಾಂಗಕ್ಕೂ ದಾರಿದೀಪವಾಗುತ್ತದೆ ಇದೇ ನಾವು ಅರ್ಪಿಸುವ ನಿಜವಾದ ಶ್ರದ್ಧಾಂಜಲಿ ಎಂದರು. ಈ ಸಂದರ್ಭದಲ್ಲಿ ಒಂದು ನಿಮಿಷದ ಮೌನಚರಣೆ ಮಾಡುವುದರ ಮೂಲಕ ದಿವಂಗತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಸದಸ್ಯ ಈಶ್ವರ ಮರಾಠಿ, ಊರ ಹಿರಿಯರಾದ ಶೇಷಾಜಾಯ ಮರಾಠಿ ಅಶ್ವಿನಿ ಉದಯ ಭಟ್ ವಿಜಯ ಹ ನಾಯ್ಕ್, ಎಸ್ ಡಿ ಎಮ್ ಸಿ ಅಧ್ಯಕ್ಷ ನಾರಾಯಣ ಮರಾಠಿ ವಿಷ್ಣು ಮರಾಠಿ ಗಣಪತಿ ಮರಾಠಿ ಗಜಾನನ ಹ ನಾಯಕ್ ಯಂಕು ಮರಾಠಿ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.