Image
Breaking News
• ಸೋ ಎನ್ನೀರೇ ಸೊಬನ( ಶೋಬಾನ )ಬನ್ನೀ ರೇ  • ರೈತರ ಬಾಳಿಗೆ ಮೃಗವಾಗುತ್ತಿರುವ ಮೃಗಶಿರ 
21 Jun 2026 | 
ಮನೆಯಲ್ಲಿ ಆಕಳು ಹಿತ್ತಲಲ್ಲಿ ತಿಪ್ಪೆ ಜೋಪಾನ ಮುಖ್ಯ : ಶಿವನಗೌಡ ಸಿಂದೋಗಿ 

ಮನೆಯಲ್ಲಿ ಆಕಳು ಹಿತ್ತಲಲ್ಲಿ ತಿಪ್ಪೆ ಜೋಪಾನ ಮುಖ್ಯ : ಶಿವನಗೌಡ ಸಿಂದೋಗಿ 



Author : Vinayak M Bhat

ಮನೆಯಲ್ಲಿ ಆಕಳು ಹಿತ್ತಲಲ್ಲಿ ತಿಪ್ಪೆ ಜೋಪಾನ ಮಾಡುವದು ಮುಖ್ಯ ಎಂದು ನಿವೃತ್ತ ಸೈನಿಕ ಶಿವನಗೌಡ ಸಿಂದೋಗಿ ಹೇಳಿದರು.

ಪಟ್ಟಣದ 12ಮಠದಲ್ಲಿ ಭಾರತೀಯ ಕೃಷಿಕ ಸಮಾಜ ನವದೆಹಲಿ (ರಿ )ಯ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ತಾಲೂಕು ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿಯೊಡನೆ ಮುಂದೆ ಸಾಗುತ್ತಿದೆ ಇದನ್ನು ಹೋಗಲಾಡಿಸಲು ಇಂತಹ ಸಂಘಟನೆಗಳ ಪಾತ್ರ ಮುಖ್ಯ ಎಂದರು. ಬಸವರಾಜ ಯೋಗಪ್ಪನವರ ಮಾತನಾಡಿ ರೈತನಿಗೆ ಹಸಿರು ವಸ್ತ್ರವೇ ಅಸ್ತ್ರ ಅನ್ಯಾಯವಾದಾಗ ಪ್ರತಿಭಟಿಸಿರಿ ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದರು.ನಿವೃತ್ತ ಶಿಕ್ಷಕ ನಾಗನಗೌಡ ಪಾಟೀಲ, ನಿವೃತ್ತ ಸೈನಿಕರಾದ ಪ್ರಶಾಂತಕುಮಾರ ಅಕ್ಕಿ, ಶಂಕರ ಈರಪ್ಪ ಬೆಟಗೇರಿ ಇವರನ್ನು ಸನ್ಮಾನಿಸಲಾಯಿತು.ತಾಲೂಕಿನ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಕುಂದಗೋಳ ಹುಬ್ಬಳ್ಳಿ, ಧಾರವಾಡ, ಅಣ್ಣಿಗೇರಿ ತಾಲೂಕಿನ ಪದಾಧಿಕಾರಿಗಳಿಗೂ ಆದೇಶ ಪತ್ರದೊಂದಿಗೆ ಪದಗ್ರಹಣ ಮಾಡಲಾಯಿತು.

     ಸಾನಿಧ್ಯವನ್ನು ಷ.ಬ್ರ.ರೇವಣಸಿದ್ಧ ಶಿವಾಚಾರ್ಯ ಮಾಹಾಸ್ವಾಮಿಗಳು, ಉದ್ಘಾಟನೆಯನ್ನು ರಾಜ್ಯ ಉಪಾಧ್ಯಕ್ಷ ವಿ. ಎಸ್. ಕಂಟೆಪ್ಪಗೌಡ್ರ, ಮಾಧ್ಯಮ ಸಲಹೆಗರರಾಗಿ ನೇಮಕಗೊಂಡ ರಮೇಶ ಸೋಲಾರಗೊಪ್ಪ ಸ್ವಾಗತಿಸಿ ನಿರೂಪಿಸಿದರು.