ರೈತರ ಬಾಳಿಗೆ ಮೃಗವಾಗುತ್ತಿರುವ ಮೃಗಶಿರ
Author : Vinayak M Bhat
ವಿಶೇಷ ವರದಿ ವಿನಾಯಕ ಭಟ್ಟ ಹುಲ್ಲಂಬಿ.
ಅದೊಂದು ಕಾಲವಿತ್ತು, ಮೃಗಶಿರಾ ಮಳೆ ಎಂದೊಡನೆ ನೆನಪಾಗುವುದು ಕೆಸರು ರಸ್ತೆಗಳು, ಕೆಸರು ಗದ್ದೆಗಳು, ಕೇಸರಿನಲ್ಲೇ ಭತ್ತದ ಕೃಷಿ, ಯಂತ್ರಗಳಿಲ್ಲ, ಬೆಳಿಗ್ಗೆ 4.30ಕ್ಕೆ ಎದ್ದು ರೈತನ ಎದೆ ಅನ್ನುವ ಎತ್ತುಗಳಿಗೆ ಆಹಾರ ಉಪಚಾರ,ಎಡೆ ಹೊಡೆಯುವದು, ಹೊಡ್ತ (ಭತ್ತದ ಕೃಷಿಯಒಂದು ಕಾರ್ಯ )ಇದ್ದ ಆಹಾರ ಸಿದ್ಧ ಪಡಿಸಿಕೊಂಡು ಗೊರಬು ಹಾಕಿಕೊಂಡು (ಬಿದಿರಿನಿಂದ ತಯಾರಿಸಿದ ನೈಸರ್ಗಿಕ ಕೊಡೆ)ಸಂಜೆ ವರೆಗೆ ಮಳೆಯಲ್ಲೇ ನೆನೆದು ಕೃಷಿ ಮಾಡುವ ಮಹಿಳೆಯರು, ಸಂಜೆ ಆದರೆ ವಿದ್ಯುತ್ ಇರಬಹುದು ಇರಲಿಕ್ಕಿಲ್ಲ, ಇರ್ಲಿ ಬಿಡಿ, ಆದರೆ ಮನೆ ತುಂಬಾ ದವಸ ಧಾನ್ಯ,ಹೆಚ್ಚಾಗಿ ಕಲಘಟಗಿ ಕೃಷಿ ಅರೆಮಲೆನಾಡು ಪ್ರದೇಶ ಆಗಿದ್ದರಿಂದ ಇದು ಭತ್ತದ ಕಣಜ ಎಂದೇ ಹೆಸರು ಪಡೆದಿತ್ತು.
ಆದರೆ ಇಂದು ಬದಲಾದ ಕೃಷಿ ನಮ್ಮ ಕಣ್ಣ ಮುಂದೆ ಇದೆ, ಯಂತ್ರಗಳ ಘರ್ಜನೆ, ಬೀಜ ಗೊಬ್ಬರ ಸೇರಿ ಪ್ರತಿಯೊಂದನ್ನೂ ಖರೀದಿ ಸಬೇಕು, ಬಿತ್ತಿದ್ದಾನೆ, ಆದರೆ ಆಗಿದ್ದ ಮಳೆಗಾಲ ಇಂದು ಬೇಸಿಗೆಯ ಬಿಸಿಲನ್ನು ಮೀರಿಸುತ್ತಿದೆ. ಬೀಜ ಹುಟ್ಟುವ ಹಸಿಯೂ ಮಾಯವಾಗುತ್ತಿದೆ.
ಮೊದಲೇ ಅರೆಮಲೆನಾಡು, ಶಾಶ್ವತ ನೀರಾವರಿ ಇಲ್ಲಾ,ಕಾಳಿ ನದಿ ಪಕ್ಕದಲ್ಲೇ ಇದ್ದರೂ ಸಮುದ್ರ ಸೇರುತ್ತದೆ ವಿನ್ಹ ಯೋಜನೆ ಸಿದ್ಧಪಡಿಸಿ ಅನುಷ್ಠಾನಿಸುವ ಇಚ್ಚಾಶಕ್ತಿ ರಾಜಕಾರಣಿಗಳಿಗೆ ಇಲ್ಲಾ, ಮುಂದಿನ ದಿನಗಳಲ್ಲಿ ಕಲಘಟಗಿ ಕೃಷಿ ಕ್ಷೇತ್ರ ಶಾಶ್ವತ ನೀರಾವರಿ ಹೊಂದಲಿ, ರೈತನ ಬಾಳು ಬಂಗಾರವಾಗಲಿ ಎಂದು Bnewshub ಹಾರೈಸುತ್ತದೆ.














