Image
Breaking News
• ಸೋ ಎನ್ನೀರೇ ಸೊಬನ( ಶೋಬಾನ )ಬನ್ನೀ ರೇ  • ರೈತರ ಬಾಳಿಗೆ ಮೃಗವಾಗುತ್ತಿರುವ ಮೃಗಶಿರ 
21 Jun 2026 | 
ಸೋ ಎನ್ನೀರೇ ಸೊಬನ( ಶೋಬಾನ )ಬನ್ನೀ ರೇ 

ಸೋ ಎನ್ನೀರೇ ಸೊಬನ( ಶೋಬಾನ )ಬನ್ನೀ ರೇ 



Author : Vinayak M Bhat

ವರುಣನ ಆಗಮನಕ್ಕಾಗಿ ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮದಲ್ಲಿ ಕಪ್ಪೆಗಳ ಮದುವೆ.

 

ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಟ್ರಸ್ಟ್ ಕಮೀಟಿ ಅಧ್ಯಕ್ಷ ವಿ ಎಸ್ ಬೆಣ್ಣಿ ಅವರ ನೇತೃತ್ವದಲ್ಲಿ.

ಹಳ್ಳಿ ಎಂದರೆ ಮೂಗು ಮುರಿಯುವವರೇ ಜಾಸ್ತಿ. ಆದರೆ ಹಳ್ಳಿಗಳ ಸೊಗಡು, ಹಬ್ಬಗಳ ಆಚರಣೆ,   ಸಂಪ್ರದಾಯಬದ್ಧ ಆಚಾರ ವಿಚಾರಗಳಿಗೆ ಏನೂ ಕಡಿಮೆ ಇಲ್ಲಾ, ರೈತ ವರ್ಗವೇ ತುಂಬಿರುವ ಹಳ್ಳಿಗಳಲ್ಲಿ ಪ್ರಪಂಚಕ್ಕೇ ಅನ್ನ ನೀಡುವ ಅನ್ನದಾತ ಎನಿಸಿಕೊಂಡಿದ್ದಾನೆ,  ಆದರೆ ಸೃಷ್ಟಿಯನ್ನೇ ನಂಬಿ ಆಹಾರ ನೀಡುವ ರೈತನಿಗೆ ಮಳೆರಾಯ ಮುನಿಸಿಕೊಂಡಿದ್ದಾನೆ.ಭೂಮಿ ತಾಯಿಗೆ ಬೀಜ ಗೊಬ್ಬರ ಹಾಕಿ ಮಳೆ ಬಾರದೆ ಚಿಂತಾಕ್ರಾಂತನಾಗಿದ್ದಾನೆ..

ಮಳೆ ಕೈ ಕೊಟ್ಟಾಗ ಕಪ್ಪೆಗಳ ಮದುವೆ ಆಚರಣೆ ದೇಶಾದ್ಯಂತ ಆಚರಿಸುವ ಸಂಪ್ರದಾಯವಿದೆ, ಈ ಗ್ರಾಮದ ಎಲ್ಲರೂ ಮಳೆರಾಯನ ಆಗಮನಕ್ಕಾಗಿ ಕಪ್ಪೆಗಳ ಮದುವೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

      (  ವರೋಪಚಾರ ಒಂದನ್ನು ಬಿಟ್ಟು )

ಬೇರೆ ಎಲ್ಲವೂ ಶಾಸ್ತ್ರೋಕ್ತವಾಗಿ ಹಾಲುಗಂಬ, ಸುರಗಿ ನೀರು, ಅರಿಶಿನ ಕಾರ್ಯ  ಕಂಕಣ ಕಟ್ಟುವದು, ವಧುವಿಗೆ (ಹೆಣ್ಣು ಕಪ್ಪೆಗೆ )ವಿಶೇಷ ಅಲಂಕಾರ, ಹೂ ಮುಡಿಸುವದು  ಹಸಿರು ಬಳೆ ತೊಡಿಸುವದು, ಊರ ತುಂಬಾ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ ಗ್ರಾಮದ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ವೇದ ಮಂತ್ರಗಳೊಂದಿಗೆ ಶಾಸ್ತ್ರಗಳ ಪ್ರಕಾರ ಮದುವೆ ಮಂಗಲಕಾರ್ಯ ನೆರವೇರಿಸಿದರು. ಮದುವೆಯ ಊಟವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿ ವರುಣ ಆದಷ್ಟು ಬೇಗ ಬರಲಿ ಎಂದು ಪ್ರಾರ್ಥಿಸಿದರು..

ರೈತ ಉಳಿಯಲಿ ದೇಶ ಬೆಳೆಯಲಿ.

ವಿನಾಯಕ.ಭಟ್ಟ. ಬಿ ನ್ಯೂಸ್ ಹಬ್. ಹುಲ್ಲoಬಿ.