Image
Breaking News
• ಸೋ ಎನ್ನೀರೇ ಸೊಬನ( ಶೋಬಾನ )ಬನ್ನೀ ರೇ  • ರೈತರ ಬಾಳಿಗೆ ಮೃಗವಾಗುತ್ತಿರುವ ಮೃಗಶಿರ 
21 Jun 2026 | 
ಕಸದಿಂದ ರಸ. ನಿಜವಾದ ಕಾಯಕ ಯೋಗಿಗಳು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ

ಕಸದಿಂದ ರಸ. ನಿಜವಾದ ಕಾಯಕ ಯೋಗಿಗಳು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ



Author : Vinayak M Bhat

ಕಸದಿಂದ ರಸ. ನಿಜವಾದ ಕಾಯಕ ಯೋಗಿಗಳು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ 
ಹೆಸರು ಯಲ್ಲಪ್ಪ, ಕಲಘಟಗಿ ನಿವಾಸಿ.. ಮೂಲತ ಹಳ್ಳಿಗಳಿಗೆ ಹೋಗಿ ರೈತರಿಗೆ ಕೃಷಿ ಉಪಯೋಗಕ್ಕೆ ಹಗ್ಗ ಮಾಡಿಕೊಡುವ ಪ್ರವೃತ್ತಿ, ಪುಂಡಿ ನಾರು (ಪುಂಡಿ ಬೆಳೆಯ ದಂಟಿನ ಸಿಪ್ಪೆಯಿಂದ ತೆಗೆಯುವವಸ್ತು). ಆಧುನಿಕತೆಯ ಪರಿಣಾಮ ಈ ಬೆಳೆಯೂ ಹೋಯಿತು, ಈ ಹಗ್ಗಗಳೂ ಮಾಯವಾದವು. ಆದರೆ ಇವರು ಮಾಡಿಕೊಂಡ ಜೀವನ ಜೋಕಾಲಿಯ ಉದ್ಯೋಗಗಳನ್ನು ಇಂದಿಗೂ ಬಿಟ್ಟಿಲ್ಲ. ನಾವುಗಳು ಹಬ್ಬ ಬಂತೆಂದರೆ ತೆಂಗಿನ ಮರ ಏರಿ ಗರಿಗಳನ್ನು ಕಡೆದು ಅಲಂಕಾರಕ್ಕೆ ಬಳಸುತ್ತೇವೆ. ನಂತರ ಸ್ವಚ್ಛಗೊಳಿಸಲು ಈ ಗರಿಗಳನ್ನು ಊರ ಹೊರಗೆ ಬೀಸಾಡಿ ಬರುತ್ತೇವೆ. ಇಂಥ ಗರಿಗಳನ್ನು ಹುಡುಕಿಕೊಂಡು ಕಸವಾಗುವ ಇಂತಹ ಗರಿಗಳಿಂದ (ಒಂದು ಗರಿಗೆ ಒಂದು ಕಸಬರಿಗೆ ದರ 20 ರೂಪಾಯಿಗಳು)
ಕಸಬರಿಗೆ ತಯಾರಿಸುತ್ತಾರೆ, ಉಳಿದ ದಿನಗಳಲ್ಲಿ ಸಮಯ ಸಿಕ್ಕಾಗ ತೋಟಗಳಿಗೆ ಅಲೆದಾಡಿ ಗರಿಗಳನ್ನು ಹುಡುಕಿ ಕಸಬರಿಗೆ ತಯಾರಿಸುತ್ತಾರೆ.ದಿನದ ಸಮಯದಲ್ಲಿ ತಲೆ ಮೇಲೆ ಹೊತ್ತು ಮಾರುತ್ತಾರೆ.ಪೇಟೆಯಲ್ಲಿ ಬ್ರಾಂಡ್ ಕಸಬರಿಗೆ  ಖರೀದಿಸುವ ನಾವು ಇವರಿಂದ ಖರೀದಿಸಿದಾಗ ಈ ಬದುಕಿನ ಜಟಕಾ ಬಂಡಿಗೆ ಇಂತಹ ಕುಟುಂಬಗಳಿಗೆ ಆಶ್ರಯ ಆದಂತೆ ಆಗುತ್ತದೆ, ನಮ್ಮ ಪರಿಸರವನ್ನು ಉಳಿಸಿದಂತಾಗುತ್ತದೆ.

ಬಿ ನ್ಯೂಸ್ ಹಬ್ ಕಲಘಟಗಿ.