ರೈತರಿಗೆ ಸಮರ್ಪಕವಾಗಿ ಯೋಜನೆ ಮಾಹಿತಿ ಕೊಡಿ :ಸಂತೋಷ ಲಾಡ್.
Author : Vinayak M Bhat
ರೈತರಿಗೆ ಸಮರ್ಪಕವಾಗಿ ಯೋಜನೆಗಳ ಮಾಹಿತಿ ಕೊಡಿರಿ ಎಂದು ನೂತನ ಸಚಿವ ಸಂತೋಷ ಲಾಡ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಜಿಲ್ಲಾ ಪಂಚಾಯತ್ ಧಾರವಾಡ, ತಾಲೂಕು ಪಂಚಾಯತ್ ಕಲಘಟಗಿ ಸಹಯೋಗದಲ್ಲಿ ಬರ ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಸಗೊಬ್ಬರ ವಿತರಣೆ ಸಮರ್ಪಕವಾಗಿರಲಿ,ಕೃಷಿ ಸಲಕರಣೆ, ಮತ್ತು ರಸಗೊಬ್ಬರ ಕೇಂದ್ರಗಳಲ್ಲಿ ದರಪಟ್ಟಿ, ಮತ್ತು ಸಿ. ಸಿ. ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಿ ರಿ, ಬೆಳೆ ಸಮೀಕ್ಷೆ ಪೂರ್ಣಗೊಳಿಸಿ, ತೋಟಗಾರಿಕೆಗೆ ಸಂಬಂಧಿಸಿದಂತೆ ಮಾಹಿತಿ ಯ ಕರಪತ್ರ ಹಂಚಿರಿ, ಅಡಿಕೆ ಕ್ಷೇತ್ರ ವಿಸ್ತರಗೊಳಿಸಿ ರೈತರಿಗೆ ಇದರಿಂದ ಆರ್ಥಿಕ ವಾಗಿ ಅಭಿವೃದ್ಧಿ ಆಗುತ್ತಾರೆ,ಪಟ್ಟಣಕ್ಕೆ ಬೆ ಣಚಿ ಕೆರೆಯಿಂದ ಪೂರೈಸುತ್ತಿರುವ ಕುಡಿಯುವ ನೀರಿನ ಪೈಪ್ ಲೈನ್ನಲ್ಲಿ ನೀರು ಸೋರಿಕೆ ದೂರಗಳು ಬಂದಿವೆ ಆದಷ್ಟು ಬೇಗನೇ ಸರಿಪಡಿಸಲು ಸೂಚಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 98.63%ಸಾಧನೆ ಮಾಡಿದೆ ಮುಂದಿನ ಸಾಲಿಗೆ 100%ಪ್ರಗತಿ ಆಗಲಿ ಎಂದರು. ವಿವಿಧ ಇಲಾಖೆಗಳ ಪ್ರಗತಿಯ ಅಂಕಿ ಅಂಶಗಳನ್ನು ಪಡೆದರು. ತೆರಿಗೆ ವಸೂಲಾತಿಯಲ್ಲಿ 100%ಪ್ರಗತಿ ಮಾಹಿತಿಯನ್ನು ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ್ ಸಾವಂತ ನೀಡಿದರು, ಹಾಗೂ ಸಾಧನೆಗೈದ ಪಿ ಡಿ ಒ ಹಾಗೂ ಸಿಬ್ಬಂದಿಗಳಿಗೆ ಪ್ರಮಾಣ ಪತ್ರ ನೀಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯಾ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಜಿಲ್ಲಾ ಪಂಚ ಗ್ಯಾರಂಟಿ ಅಧ್ಯಕ್ಷ ಎಸ್ ಆರ್ ಪಾಟೀಲ, ತಾಲೂಕು ಪಂಚ ಗ್ಯಾರಂಟಿ ಅಧ್ಯಕ್ಷ ಬಸಪ್ಪ ಬಾವಕರ,ಶಾಸಕರ ಆಪ್ತಕಾರ್ಯದರ್ಶಿಗಳಾದ ಹರಿಶಂಕರ ಮಠದ, ಸೋಮಶೇಖರ್ ಬೆನ್ನೂರ, ಬಾಳು ಖಾನಾಪುರ, ವಿವಿಧ ಇಲಾಖೆಯ ಅಧಿಕಾರಿಗಳು,ಎಲ್ಲ ಗ್ರಾ ಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ್ ಸಾವಂತ ಸ್ವಾಗತಿಸಿ ನಿರೂಪಿಸಿದರು.













