ಕಲಘಟಗಿ - ಕರಡಿ ದಾಳಿ ಸ್ಥಳದಲ್ಲೇ ರೈತ ಸಾವು
Author : Vinayak M Bhat
ಕಲಘಟಗಿ - ಕರಡಿ ದಾಳಿ ಸ್ಥಳದಲ್ಲೇ ರೈತ ಸಾವು :ಸ್ಥಳಕ್ಕೆ ಡಿ. ಎಫ್. ಒ. ಅಲೀಮ್ ಸಿದ್ದಿಕಿ, ಆರ್ ಎಫ್ ಒ ಅರುಣಕುಮಾರ ಅಷ್ಟಗಿ, ಸಿ ಪಿ ಐ ಶ್ರೀಶೈಲ ಕೌಜಲಗಿ ಪರಿಶೀಲನೆ.
ತಾಲೂಕಿನ ಬೆಂಡಲಗಟ್ಟಿ ಗ್ರಾಮದ 49 ವಯಸ್ಸಿನ ಶಂಕ್ರಪ್ಪ ಪರಸಪ್ಪ ಲಮಾಣಿ ಎಂಬ ರೈತ ಕಬ್ಬಿನ ಹೊಲಕ್ಕೆ ಕೃಷಿ ಕೆಲಸಕ್ಕೆ ಹೋದಾಗ ಮಧ್ಯಾಹ್ನದ ವೇಳೆ ಕರಡಿ ದಾಳಿ ಮಾಡಿದೆ. ತೀವ್ರವಾಗಿ ದಾಳಿಯಿಂದ ತತ್ತರಿಸಿದ ರೈತ ಆಸ್ಪತ್ರೆಗೆ ಸಾಗಿಸುವ ಮೊದಲೇ ಮೃತಪಟ್ಟಿದ್ದಾನೆ,ರೈತನ ಕಿರಿಚಾಟದಿಂದ ಓಡಿ ಬಂದ ಜನರನ್ನು ನೋಡಿ ಕರಡಿ ಓಡಿ ಹೋಯಿತಾದರೂ ಅಷ್ಟರಲ್ಲೇ ಕರಡಿ ತೀವ್ರವಾಗಿ ದಾಳಿ ಮಾಡಿತ್ತು ಎಂದು ತಿಳಿದು ಬಂದಿದೆ.
ಆದಷ್ಟು ತೀವ್ರವಾಗಿ ಈ ಕುರಿತು ಕ್ರಮ ಕೈಗೊಳ್ಳುತ್ತೇವೆ, ಸುತ್ತ ಮುತ್ತಲಿನ ಗ್ರಾಮಸ್ಥರು ಒಂಟಿಯಾಗಿ ತಿರುಗಬಾರದೆಂದು ಎಚ್ಚರಿಕೆ ವಹಿಸಲು ಆರ್ ಎಫ್ ಒ ಅರುಣಕುಮಾರ ಅಷ್ಟಗಿ ತಿಳಿಸಿದ್ದಾರೆ. ಅತೀ ಶೀಘ್ರವಾಗಿ ತನಿಖೆ ಕೈಗೊಂಡು ರೈತ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಕೊಡಿಸುವದಾಗಿ ಡಿ ಎಫ್ ಒ ಅಲೀಮ್ ಸಿದ್ದಿಕಿ ತಿಳಿಸಿದ್ದಾರೆ.












