ದೇಶಾಭಿಮಾನ ಬೆಳೆಸಿಕೊಳ್ಳೋಣ ನಾಗರಾಜ ಛಬ್ಬಿ.
Author : Vinayak M Bhat
ಕಲಘಟಗಿ :ಪ್ರತಿ ಮನೆ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಮೂಲಕ ದೇಶಾಭಿಮಾನ ಬೆಳೆಸಿಕೊಳ್ಳೋಣ ಎಂದು ಮಾಜಿ ಎಂ ಎಲ್ ಸಿ ಹಾಗೂ ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಹೇಳಿದರು.

ಪಟ್ಟಣದಲ್ಲಿ 80 ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಸ್ವಾತಂತ್ರ್ಯ ಉತ್ಸವವು ಎಲ್ಲ ಭಾರತಿಯರ ಜನ್ಮ ಸಿದ್ಧ ಹಕ್ಕು, ಇಂತಹ ಸಂಧರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣ ಹೊಂದಿದವರನ್ನು ಸ್ಮರಿಸಬೇಕಾದದ್ದು ಎಲ್ಲ ಭಾರತಿಯರ ಕರ್ತವ್ಯ ಎಂದರು. 500 ಅಡಿ ಉದ್ದದ ರಾಷ್ಟ್ರಧ್ವಜದೊಂದಿಗೆ ತಿರಂಗಾ ಯಾತ್ರಾ ಮಾಡಲಾಯಿತು.
ಈ ಸಂಧರ್ಭದಲ್ಲಿಬಿಜೆಪಿ ಮುಖಂಡ ಶಶಿಧರನಿಂಬಣ್ಣವರ,ಕಿರಣ ಪಾಟೀಲ ಕುಲಕ ರ್ಣಿ, ನಿಂಗಪ್ಪ ಸುತಗಟ್ಟಿ, ಯಲ್ಲಾರಿ ಶಿಂಧೆ, ನ್ಯಾಯವಾದಿ ಅಣ್ಣಪ್ಪ ಓಲೇಕಾರ, ರಾಘವೇಂದ್ರ ಅಳ್ನಾವರ, ವಿಜಯ ಲಕ್ಷ್ಮೀ ಆಡಿನವರ, ಅಶೋಕ ಆಡಿನವರ, ಗೀತಾ ಮರಿಲಿಂಗಣ್ಣನವರ,ಬಸವರಾಜ ಶೆರೆವಾಡ, ಆನಂದ ಕಡ್ಲಾಸ್ಕರ , ಸಂತೋಷ ಮದನಭಾವಿ, ನಿಂಗಪ್ಪ ಪತ್ರಿಗಿಡದ,ಚನ್ನಬಸಪ್ಪ ಶಿಗ್ಗಟ್ಟಿ,ಶಶಿಧರ ಬಸವರಾಜ ಹೊನ್ನಳ್ಳಿ, ಪರಶುರಾಮ ಹುಲಿಹೊಂಡ,ಶಶಿಧರ್ ದ್ಯಾವಪ್ಪನವರ,ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.













